
ಪ್ರಗತಿವಾಹಿನಿ ಸುದ್ದಿ: ಭೇಟಿಯಾಗುವ ನೇಪದಲ್ಲಿ ಬಿಜೆಪಿ ನಾಯಕನ ಹೊಟ್ಟೆಗೆ ವಿಷಕಾರಿ ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಿಜೆಪಿ ನಾಯಕ ಗುಲ್ಬಮ್ ಸಿಂಗ್ ಯಾದವ್ (60) ಅವರು ಮನೆಯಲ್ಲಿ ಕುಳಿತಿದ್ದಾಗ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಇಂಜೆಕ್ಷನ್ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಾಯಕನನ್ನು ಭೇಟಿಯಾಗುವ ನೆಪದಲ್ಲಿ ಮೂವರು ದಾಳಿಕೋರರು ಆ ಪ್ರದೇಶಕ್ಕೆ ಪ್ರವೇಶಿಸಿದ್ದರು. ಗುಲ್ಬಮ್ ಸಿಂಗ್ ಅವರ ಜೊತೆ ಕುಳಿತು, ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಬಳಿಕ ನೀರು ಕೇಳಿ ಅದನ್ನು ಕುಡಿದು ಕೂಡಲೇ ಅವರನ್ನು ಹಿಡಿದು ಹೊಟ್ಟೆಗೆ ಇಂಜೆಕ್ಷನ್ ನೀಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ವಿಷವು ದೇಹದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತಿದ್ದಂತೆ, ಬಿಜೆಪಿ ನಾಯಕನ ಆರೋಗ್ಯ ಹದಗೆಡಲು ಆರಂಭಿಸಿದೆ.
ಕೂಡಲೇ ನೋವಿನಿಂದ ಗುಲ್ಬಮ್ ಸಿಂಗ್ ಕಿರುಚಿದ್ದಾರೆ. ಈ ವೇಳೆ ಕುಟುಂಬಸ್ಥರು ಹಾಗೂ ಸ್ಥಳೀಯರು ಓಡೋಡಿ ಬಂದಿದ್ದಾರೆ ಜೊತೆಗೆ ಅವರನ್ನು ಅಲಿಘರ್ ನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆ ಗುಲ್ಬಮ್ ಸಾವನ್ನಪ್ಪಿದ್ದಾರೆ.
ಸದ್ಯ ಗುಲ್ಬಮ್ ಸಿಂಗ್ ಯಾದವ್ ಅವರ ಮೃತದೇಹವನ್ನು ಅಲಿಘರ್ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ