Latest

ವಯಸ್ಕರ ಶಿಕ್ಷಣ ಯೋಜನೆಯಿದ್ದರೂ ಬೆಳೆಯದ ‘ಪಪ್ಪು’ವಿನ ಬುದ್ಧಿ; ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬಿಜೆಪಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಟ್ವೀಟಾಸ್ತ್ರ ಮುಂದುವರೆದಿದ್ದು, ‘ಹೆಬ್ಬಟ್ ಗಿರಾಕಿ’ ಎಂಬ ರಾಹುಲ್ ಗಾಂಧಿ ವಿರುದ್ಧದ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್ ‘ಹೆಬ್ಬಟ್ ಗಿರಾಕಿ ಮೋದಿ’ ಎಂದು ಗುಡುಗಿತ್ತು. ಇದೀಗ ಮತ್ತೆ ಎದುರೇಟು ನೀಡಿರುವ ಬಿಜೆಪಿ ವಯಸ್ಕರ ಶಿಕ್ಷಣ ಯೋಜನೆಯಿದ್ದರೂ ‘ಪಪ್ಪು’ವಿನ ಬುದ್ಧಿ ಬೆಳೆಯಲಿಲ್ಲ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ನರೇಂದ್ರ ಮೋದಿ ಓದಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು, ಆದರೂ ಓದಿಲ್ಲ, ಹೆಬ್ಬಟ್ಟು ಗಿರಾಕಿ ಮೋದಿಯಿಂದ ದೇಶದ ಜನ ನರಳುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿತ್ತು, ಕಾಂಗ್ರೆಸ್ ಹೇಳಿಕೆಗೆ ಟ್ವಿಟರ್ ನಲ್ಲೇ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ದೇಶದಲ್ಲಿ ಸಾಕಷ್ಟು ಶಾಲೆಗಳಿದ್ದವು, ಆದರೆ 50 ವರ್ಷ ಮೇಲ್ಪಟ್ಟ ಅತಿ ಹಿರಿಯ ಯುವನಾಯಕ ಭಾರತದಲ್ಲಿ ಓದಲೇ ಇಲ್ಲ ಎಂದು ಲೇವಡಿ ಮಾಡಿದೆ.

ವಯಸ್ಕರ ಶಿಕ್ಷಣ ಯೋಜನೆಯಿದ್ದರೂ ‘ಪಪ್ಪು’ವಿನ ಬುದ್ಧಿ ಬೆಳೆಯಲೇ ಇಲ್ಲ, ತಾತ, ಮುತ್ತಾತ, ಅಪ್ಪ ಪ್ರಧಾನಿ ಆಗಿದ್ದಾರೆ ಎಂಬ ಒಂದೇ ಅರ್ಹತೆಯ ಆಧಾರದ ಮೇಲೆ ತಾನು ಪ್ರಧಾನಿಯಾಗುತ್ತೇನೆ ಎಂದು ಭಿಕ್ಷುಕನಂತೆ ಅಲೆಯುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದೆ.
ನಾವು ಶಾಲೆ ಕಟ್ಟಿಸಿ, ವಯಸ್ಕರ ಶಿಕ್ಷಣ ಜಾರಿ ಮಾಡಿದರೂ ಮೋದಿ ಓದಲಿಲ್ಲ; ‘ಹೆಬ್ಬಟ್ಟ್ ಗಿರಾಕಿ ಮೋದಿ’ ಎಂದು ತಿರುಗೇಟು ನೀಡಿದ ಕಾಂಗ್ರೆಸ್

Home add -Advt

Related Articles

Back to top button