Kannada NewsKarnataka NewsLatest

*ಕೊಲೆ ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್*

ಪ್ರಗತಿವಾಹಿನಿ ಸುದ್ದಿ: ಜೈಲಿನಿಂದ ನಿನ್ನೆಯಷ್ಟೇ ಬಿಡುಗಡೆಯಾಗಿ ಬಂದಿದ್ದ ಯುವಕನನ್ನು ಮಾತುಕತೆಗೆಂದು ಕರೆದು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಪರರಿಯಾಗಿದ್ದ ಘಟನೆ ಬೆಂಬಳೂರಿನ ಜೆ.ಜೆ.ನಗರದಲ್ಲಿ ನಡೆದಿತ್ತು.

ವಿಜಯ್ ಕೊಲೆಯಾದ ಯುವಕ. ದೀಪು (28) ಹಾಗೂ ಅರುಣ್ (27) ಎಂಬುವವರು ವಿಜಯ್ ನನ್ನು ಹತ್ಯೆಗೈದು ಆರ್. ಆರ್ ನಗರದಲ್ಲಿ ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಪಡೆದು ಆರೋಪಿಗಳ ಬಂಧನಕ್ಕೆ ಯತ್ನಿಸಿದಾಗ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಎ ಎಸ್ ಐ ಕುಮಾರ್, ಕಾನ್ಸ್ ಟೇಬಲ್ ಕರೀಂ ಸಾಬ್ ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗಾಗಿ ಪಿಐ ಕೆಂಪೇಗೌಡ, ಪಿಎಸ್ ಐ ಪದ್ಮನಾಭ, ಇಬ್ಬರು ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಗಳಾದ ಅರುಣ್, ದೀಪು ಕಾಲಿಗೆ ಗುಂಟೇಟು ತಗುಲಿದೆ. ತಕ್ಷಣ ಇಬ್ಬರನ್ನು ಬಂಧಿಸಿದ್ದಾರೆ. ಆರ್.ಆರ‍್.ನಗರದ ಷಣ್ಮುಗ ದೇವಾಲಯದ ಬಳಿ ಈ ಘಟನೆ ನಡೆದಿದೆ.

Related Articles

Back to top button