Latest

ವಂಚನೆ ಪ್ರಕರಣ; ಸ್ಪಷ್ಟನೆ ನೀಡಿದ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ

ಪ್ರಗತಿವಾಹಿನಿ ಸುದ್ದಿ; ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಎಂಬ ಸುದ್ದಿ ಹರಡುತ್ತಿದೆ. ಇದೊಂದು ಸುಳ್ಳು ಸುದ್ದಿ, ನನಗೆ ಕುರುಕುಳ ನೀಡಲು ಯತ್ನಿಸುತ್ತಿರುವ ದುಷ್ಟ ವ್ಯಕ್ತಿಯ ಕೆಲಸ ಇದು ಎಂದು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕಿಡಿಕಾರಿದ್ದಾರೆ.

ಕಾರ್ಯಕ್ರಮವೊಂದರ ಆಯೋಜಕರಿಂದ ಮುಂಗಡವಾಗಿ 37 ಲಕ್ಷ ರೂಪಾಯಿ ಹಣ ಪಡೆದಿದ್ದ ಸೋನಾಕ್ಷಿ, ಕೊನೆ ಕ್ಷಣದಲ್ಲಿ ಈವೆಂಟ್ ಗೆ ಹೋಗದೇ ಗೈರಾಗಿದ್ದರು. ಅಲ್ಲದೇ ಹಣವನ್ನು ವಾಪಸ್ ಕೇಳಿದರೆ ನಿರಾಕರಿಸಿದ್ದರು ಎಂದು ಈವೆಂಟ್ ಆಯೋಜಕ ಪ್ರಮೋದ್ ಶರ್ಮಾ ಎಂಬುವವರು ಸೋನಾಕ್ಷಿ ವಿರುದ್ಧ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸೋನಾಕ್ಷಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ ಎಂದು ಹೇಳಲಾಗಿತ್ತು.

ಇದೀಗ ಈ ಬಗ್ಗೆ ಸ್ವತ: ಸೋನಾಕ್ಷಿ ಪ್ರತಿಕ್ರಿಯಿಸಿದ್ದು, ಇದೊಂದು ನಕಲಿ ಸುದ್ದಿಯಾಗಿದ್ದು, ನನ್ನ ವಿರುದ್ಧ ಆರೋಪ ಮಾಡಿದ ವ್ಯಕ್ತಿ ತಾನು ಜನಪ್ರಿಯತೆ ಪಡೆದುಕೊಳ್ಳಲು ಇಂತಹ ಆರೋಪ ಮಾಡಿದ್ದಾನೆ ಎಂದಿದ್ದಾರೆ.

ನನ್ನ ವಿರುದ್ಧ ಸುಳ್ಳು ಸುದ್ದಿ ಹಾಕಿಸುವ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾನೆ. ಕಾನೂನು ತಂಡ ಅವರ ವಿರುದ್ಧ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ. ನನ್ನ ವಿರುದ್ಧ ಯಾವುದೇ ವಾರೆಂಟ್ ಜಾರಿಯಾಗಿಲ್ಲ ಎಂದು ತಿಳಿಸಿದ್ದಾರೆ.

Home add -Advt

ದೌರ್ಜನ್ಯ ಪ್ರಕರಣ; ಖ್ಯಾತ ನಟ ದಿಲೀಪ್ ಗೆ ಸಂಕಷ್ಟ

Related Articles

Back to top button