
ಪ್ರಗತಿವಾಹಿನಿ ಸುದ್ದಿ, ಹಾಸನ: ಅಂಗನವಾಡಿ ಆವರಣದಲ್ಲಿ ಹಾವು ಕಚ್ಚಿ ಪುಟ್ಟ ಬಾಲಕನೊಬ್ಬಅಸುನೀಗಿದ್ದಾನೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಯಶವಂತ್ ಹಾಗೂ ಗೌರಿ ದಂಪತಿ ಪುತ್ರ ರೋಶನ್ (4) ಮೃತಪಟ್ಟ ಬಾಲಕ.
ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆತರಲು ಹೊರಹೋದಾಗ ಅಂಗನವಾಡಿ ಆವರಣದಲ್ಲಿದ್ದ ಮಗುವಿಗೆ ಹಾವು ಕಡಿದಿದೆ. ಕೂಡಲೇ ಮಗುವನ್ನು ಬೈಕ್ ನಲ್ಲಿ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಸಕಲೇಶಪುರ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಗೆ ಕರೆ ಮಾಡಲಾಗಿತ್ತಾದರೂ ಸಕಾಲಕ್ಕೆ ಆ್ಯಂಬುಲೆನ್ಸ್ ತಲುಪದ ಕಾರಣ ಬೈಕ್ ನಲ್ಲೇ ಸಾಗಿಸಲಾಗುತ್ತಿತ್ತು.
ಬೈಕ್ ಅರ್ಧ ದಾರಿ ತಲುಪಿದಾಗ ಆ್ಯಂಬುಲೆನ್ಸ್ ಬಂತಾದರೂ ಅಷ್ಟರಲ್ಲೇ ಬಾಲಕ ಮೃತಪಟ್ಟಿದ್ದ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ರಷ್ಯನ್ ಮಹಿಳೆಯನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ್ದೇಕೆ ಗೊತ್ತೇ?
https://pragati.taskdun.com/do-you-know-why-this-russian-woman-was-added-to-the-wanted-list/
*KSRTC, BMTC ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ*
https://pragati.taskdun.com/ksrtcbmtcmetromask-rulscovidbf-7-virus/
*ಲೈಂಗಿಕ ಕಿರುಕುಳ; ಪ್ರೊ.ಡಾ.ಚಾಂದ್ ಭಾಷಾ ಸಸ್ಪೆಂಡ್*
https://pragati.taskdun.com/sexual-harassmentproffeser-suspendshrikrishna-devaraya-univercity/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ