Belagavi NewsBelgaum NewsKarnataka News

*ಜೂನ್ 15ರಂದು ತ್ರಿ ಮತಸ್ತ ಬ್ರಾಹ್ಮಣರ ವಧು-ವರ ಸಮಾವೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೂನ್ 15ರಂದು ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿ ಇರುವ ಶ್ರೀ ಸತ್ಯ ಪ್ರಮೋದ ಸಭಾಗೃಹದಲ್ಲಿ ತ್ರಿ ಮತಸ್ತ ಬ್ರಾಹ್ಮಣರ ವಧು-ವರ ಸಮಾವೇಶವನ್ನು ಶ್ರೀ ಸಪ್ತಗಿರಿ ಸೇವಾ ಪ್ರತಿಷ್ಠಾನ ಬೆಳಗಾವಿ ಮತ್ತು ವಿಶ್ವ ಮಧ್ವ ಮಹಾ ಪರಿಷತ್ ಬೆಳಗಾವಿ ವತಿಯಿಂದ ಆಯೋಜಿಸಲಾಗಿದೆ. 

ಈ ಎರಡು ಸಂಘಟನೆಗಳು ಸಮಾಜದ ಎಲ್ಲ ಬಾಂಧವರಿಗೆ ಅನುಕೂಲ ಆಗಲೆಂದು ಮಾಡಿರುವ ವೇದಿಕೆ. ತಮಗೆಲ್ಲರಿಗೂ ತಿಳಿದಂತೆ ವಿವಾಹವು ಹಿಂದೂ ಕುಟುಂಬ ವ್ಯವಸ್ಥೆಯ ಮೌಲ್ಯಧಾರಿತವೆಂದು ಪರಿಗಣಿಸಲಾಗಿದೆ. ಈ ವ್ಯವಸ್ಥೆಯನ್ನು ಬಳಪಡಿಸಲು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸದಾ ಈ ಸಂಸ್ಥೆಗಳು ಮುಂಚೂಣಿಯಲ್ಲಿ ಇರುತ್ತವೆ. 

ಈಗಾಗಲೇ ಈ ಕಾರ್ಯಕ್ರಮವನ್ನು ಕಳೆದ ಬಾರಿ ಇವೆ ಸಂಘಟನೆಗಳು ಆಯೋಜಿಸಿದಾಗ ಸುಮಾರು 300 ವಧು ಹಾಗೂ 450 ವರಗಳ ಹೆಸರುಗಳನ್ನೂ ನೋಂದಾಯಿಸಲಾಗಿತ್ತು ಮತ್ತು ಅದರಲ್ಲಿ ಸುಮಾರು 25 ಮದುವೆಗಳು ಯಶಸ್ವಿಯಾಗಿ ನಡೆದಿವೆ ಹಾಗಾಗಿ ಈ ಬಾರಿಯು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಧು ವರರು ಒಟ್ಟಾಗಿ ಸೇರಿ ಜೀವಮಾನದ ವೈವಾಹಿಕ ಬಂಧನವನ್ನು ಸ್ಥಾಪೀಸುವ ಕಡೆಗೆ ಈ ವೇದಿಕೆ ಮುಖಾಂತರ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 

ರಾಘವೇಂದ್ರ ಕಟ್ಟಿ 7353351159

ಶ್ರೀಧರ ಹಲಗತ್ತಿ 7338233598

ಶ್ರೀದೇವಿ ಕುಲಕರ್ಣಿ 9480677976

ಜ್ಯೋತಿ ಶೆಳ್ಳಿಕೇರಿ 9845249632

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button