Kannada NewsKarnataka NewsNationalTravel

*ಆಲಿಕಲ್ಲು ಮಳೆಗೆ ಸಿಲುಕಿದ ವಿಮಾನದ ಮುಂಭಾಗ ಜಖಂ: ತುರ್ತು ಲ್ಯಾಂಡ್ ಆದ ವಿಮಾನ*

ಪ್ರಗತಿವಾಹಿನಿ ಸುದ್ದಿ: ದೆಹಲಿಯಿಂದ ಶ್ರೀನಗರಕ್ಕೆ 227 ಜನರನ್ನು ಹೊತ್ತು ಹೋಗುತ್ತಿದ್ದ ಇಂಡಿಗೋ ವಿನಾನ ಇಂದು ಆಕಾಶದಲ್ಲಿ ಆಲಿಕಲ್ಲು ಮಳೆಗೆ ಸಿಲುಕಿದ ಬಳಿಕ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ನಡೆದಿದೆ.‌

ಹವಾಮಾನದ ತೊಂದರೆಯಿಂದಾಗಿ ಪೈಲಟ್ ಶ್ರೀನಗರದ ಎಟಿಸಿಗೆ ತುರ್ತು ಪರಿಸ್ಥಿತಿ ಘೋಷಿಸಿದರು. ಹವಾಮಾನ ವೈಪರೀತ್ಯದಿಂದ ಲ್ಯಾಂಡ್ ಆಗಲು ಪರದಾಡಿದ ವಿಮಾನ ಕೊನೆಗೆ ಸಂಜೆ 6.30ಕ್ಕೆ ಸುರಕ್ಷಿತವಾಗಿ ಕೆಳಗೆ ಲ್ಯಾಂಡ್ ಆಗಿದೆ.

Home add -Advt

ಇಲ್ಲಿಯವರೆಗೆ ಯಾವುದೇ ಅಧಿಕೃತ ಗಾಯಗಳು ವರದಿಯಾಗಿಲ್ಲ. ಆರಂಭಿಕ ವರದಿಗಳು ವಿಮಾನದ ಮುಂಭಾಗ ಜಖಂ ಆಗಿದೆ ಎಂದು ಹೇಳಿವೆ. ಅದರ ಫೋಟೋ ಕೂಡ ಹರಿದಾಡುತ್ತಿದೆ

ಈ ಭಯಾನಕ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿಮಾನವು ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಕಿರುಚುವುದು, ಅಳುವುದು ಮತ್ತು ಪ್ರಾರ್ಥಿಸುವುದನ್ನು ಮಾಡಿದ್ದಾರೆ. 

Related Articles

Back to top button