Kannada NewsLatest

ಬೆಳಗಾವಿ: ಸೀಜ್ ಮಾಡಿದ್ದ ಸಾರಾಯಿ ಬಾಕ್ಸ್ ಗಳನ್ನೇ ಕದ್ದ ಅಬಕಾರಿ ಅಧಿಕಾರಿಗಳು; ಐವರು ಸಿಬ್ಬಂದಿ ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇದು ಬೇಲಿಯೇ ಎದ್ದು ಹೊಲಮೇಯ್ದ ಕಥೆ. ಜಪ್ತಿ ಮಾಡಿದ್ದ ಸಾರಾಯಿ ಬಾಕ್ಸ್ ಗಳ ಪೈಕಿ 301 ಬಾಕ್ಸ್ ಗಳನ್ನೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳ್ಳತನ ಮಾಡಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

Home add -Advt

ಖಾನಾಪುರ ತಾಲೂಕಿನ ಮೋದೆಕೊಪ್ಪ ಗ್ರಾಮದ ಬಳಿ ಗೋವಾದಿಂದ ಸಾಗಿಸಲಾಗುತ್ತಿದ್ದ 753 ಸಾರಾಯಿ ಬಾಕ್ಸ್ ಗಳನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಜಪ್ತಿಮಾಡಿದ್ದ ಮಾರನೇ ದಿನವೇ 301 ಬಾಕ್ಸ್ ಗಳನ್ನು ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳ್ಳತನ ಮಾಡುವ ಮೂಲಕ ಹಿರಿಯ ಅಧಿಕಾರಿಗಳೇ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ.

ಪ್ರಕರಣ ಸಂಬಂಧ ಅಬಕಾರಿ ನಿರೀಕ್ಷಕ ದಾವಲಸಾಬ ಸಿಂದೋಗಿ, ಸದಾಶಿವ ಕೊರ್ತಿ, ಅಬಕಾರಿ ಉಪ ನಿರೀಕ್ಷಕಿ ಪುಷ್ಪಾ ಗಡಾದಿ ಸೇರಿದಂತೆ ಐವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದ್ದು, ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Related Articles

Back to top button