Kannada NewsKarnataka News

ಕೆಎಲ್ಎಸ್ ಜಿಐಟಿಯಲ್ಲಿ ಬಿಎಸ್ಸಿ (ಆನರ್ಸ್) ಜಾಗೃತಿ ಕಾರ್ಯಕ್ರಮ

ಬಿ.ಎಸ್‌ಸಿ. (ಆನರ್ಸ್) ನೀಡಲು ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಎಸ್‌ಸಿ. (ಆನರ್ಸ್) ಕೋರ್ಸ್ ಜಾಗೃತಿ ಕಾರ್ಯಕ್ರಮವನ್ನು   ಜೂನ್ 4ರಂದು 10:30 ಕ್ಕೆ ಜಿಐಟಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನದ ಭಾಗವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 4 ವರ್ಷಗಳ ಬಿ.ಎಸ್‌ಸಿ. (ಆನರ್ಸ್) ನೀಡಲು ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಆಯ್ಕೆ ಮಾಡಿದೆ.

ಈ ಕೋರ್ಸನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಬಿ.ಎಸ್‌ಸಿ. (ಆನರ್ಸ್)  ಪದವಿ ನೀಡಲು ವಿನ್ಯಾಸಗೊಳಿಸಲಾಗಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ರೊಬೊಟಿಕ್ಸ್, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ, ಪೈಥಾನ್, ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ ಉದಯೋನ್ಮುಖ ಎಂಜಿನಿಯರಿಂಗ್ ವಿಭಾಗಗಳಿಂದ ಕೌಶಲ್ಯ ಆಧಾರಿತ ಮತ್ತು ಉದ್ಯಮಕ್ಕೆ ಅಗತ್ಯವಿರುವ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.

ಬಿ.ಎಸ್‌ಸಿ. (ಆನರ್ಸ್) ಕೋರ್ಸಿನ ಎಲ್ಲಾ ಆಕಾಂಕ್ಷಿಗಳು ಮತ್ತು ಅವರ ಪಾಲಕರು ಭಾಗವಹಿಸಲು ಆಹ್ವಾನಿಸಲಾಗಿದೆ. ಪ್ರೊ.ಡಿ.ಎ.ಕುಲಕರ್ಣಿ, ಪ್ರಾಚಾರ್ಯರು, ಕೆಎಲ್ಎಸ್  ಜಿಐಟಿ ಮತ್ತು ರಾಜೇಂದ್ರ ಬೆಳಗಾಂವಕರ, ಛೇರ್ಮನ್ , ಕೆಎಲ್ಎಸ್ ಜಿಐಟಿ ಅವರು ಬಿ.ಎಸ್.ಸಿ. (ಆನರ್ಸ್) ಕೋರ್ಸ್ ಆಕಾಂಕ್ಷಿಗಳು ಮತ್ತು ಅವರ ಪೋಷಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಡಾ.ರವಿರಾಜ ಎಂ.ಕುಲಕರ್ಣಿ, ಸಂಯೋಜಕರು, ಬಿ.ಎಸ್.ಸಿ. (ಆನರ್ಸ್) ಕೋರ್ಸ್ (ಮೊಬೈಲ್: 7019572324)

KLS GIT is organising B.Sc. (Hons) Awareness Program

 

https://pragati.taskdun.com/heavy-rain-is-likely-in-different-parts-of-the-state-today-continued-yellow-alert/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button