Kannada NewsKarnataka NewsLatest

*ಬಸ್ ಹತ್ತುವಾಗ ಜಾರಿ ಬಿದ್ದ 4 ವರ್ಷದ ಬಾಲಕಿ ಮೇಲೆ ಹರಿದ ಬಸ್: ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಬಸ್ ಹತ್ತುವ ವೇಳೆ ಆಯ ತಪ್ಪಿ ಕೆಳಗೆ ಬಿದ್ದ ಬಿದ್ದ ಬಾಲಕಿ ಮೇಲೆ ಬಸ್ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ.

ಇಲ್ಲಿನ ಅರಸೀಕೆರೆ ತಾಲೂಕಿನ ಹೊಳಲ್ಕೆರೆ ಗೇಟ್ ಬಳಿ ಈ ದುರಂತ ಸಂಭವಿಸಿದೆ. 4 ವರ್ಷದ ಭಾರ್ಗವಿ ಮೃತ ಬಾಲಕಿ. ಬಾರ್ಗವಿ ತಾಯಿ ಯಮುನಾ ಜೊತೆ ದೊಡ್ಡಮೇಟಿಕುರ್ಕೆ ಆಸ್ಪತ್ರೆಗೆ ತೆರಳುತ್ತಿದ್ದಳು. ಈ ವೇಳೆ ಬಸ್ ಹತ್ತುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಬಸ್ ಹಿಂಬದಿ ಚಕ್ರ ಬಾಲಕಿ ಮೇಲೆ ಹರಿದಿದೆ. ಸ್ಥಳದಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಸೀಕೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt


Related Articles

Back to top button