Uncategorized

*ಪತ್ನಿ, ಮಗನನ್ನು ನದಿಗೆ ತಳ್ಳಿ ಆತ್ಮಹತ್ಯೆಗೆ ಶರಣಾದ ಉದ್ಯಮಿ*

ಪ್ರಗತಿವಾಹಿನಿ ಸುದ್ದಿ; ಕಾರವಾರ: ಉದ್ಯಮಿಯೊಬ್ಬರು ಹೆಂಡತಿ ಹಾಗೂ ಮಗನನ್ನು ಕಾಳಿ ನದಿಗೆ ತಳ್ಳಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಶ್ಯಾಮ್ ಪಾಟೀಲ್ (40), ಜ್ಯೋತಿ ಪಾಟೀಲ್ (35) ಹಾಗೂ ಮಗ ದಕ್ಷ (12) ಮೃತರು. ಕಾರವಾರದ ಗೋಪಾಶೆಟ್ಟಿ ಮೂಲದ ಶ್ಯಾಮ್ ಪಾಟೀಲ್ ಕುಟುಂಬ ಗೋವಾದ ಕುಕ್ಕಳ್ಳಿಯಲ್ಲಿ ವಾಸವಾಗಿತ್ತು. ಶ್ಯಾಮ್ ಪಾಟೀಲ್ ಗೋವಾದ ವೆರ್ನಾದಲ್ಲಿ ಕಾರ್ಮಿಕ ಪೂರೈಕೆ ಉದ್ಯಮದಲ್ಲಿದ್ದರು.

ಹೆಂಡತಿ ಹಾಗೂ ಮಗನನ್ನು ಕಾರವಾರದ ಕಾಳಿ ನದಿ ಬ್ರಿಡ್ಜ್ ನಿಂದ ನದಿಗೆ ತಳ್ಳಿದ್ದಾರೆ ಎನ್ನಲಾಗಿದೆ. ಜ್ಯೋತಿ ಪಾಟೀಲ್ ಹಾಗೂ ಮಗ ದಕ್ಷನ ಮೃತದೇಹ ದೇವಭಾಗ ಕಡಲ ತೀರದಲ್ಲಿ ಪತ್ತೆಯಾಗಿದ್ದು, ಶ್ಯಾಮ್ ಪಾಟೀಲ್ ಮೃತದೇಹ ಗೋವಾದ ಕುಕ್ಕಳ್ಳಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button