Latest

ಇಂಧನ ವಲಯದಲ್ಲಿ ಭಾರತ ಮುಂಚೂಣಿಯಲ್ಲಿ: ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ,  ಬೆಂಗಳೂರು: ಇಂಧನ ವಲಯದಲ್ಲಿ ಬೇಡಿಕೆಗಳು ಹೆಚ್ಚಾಗಿದ್ದು ಅದನ್ನು ಪೂರೈಸುವಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

Home add -Advt

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವತಿಯಿಂದ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ “ಇಂಡಿಯನ್ ಎನರ್ಜಿ ವೀಕ್-2023”ನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ಮಹಾಮಾರಿಯ ಸಂಕಷ್ಟದ ಮಧ್ಯೆಯೂ 2023ರಲ್ಲಿ ತನ್ನ ಆಂತರಿಕ ವಿಚಕ್ಷಣಾ ಸಾಮರ್ಥ್ಯ, ಆರ್ಥಿಕ ಸ್ಥಿತಿಸ್ಥಾಪಕತ್ವದ ಮೂಲಕ ಪ್ರತಿ ಹಂತದಲ್ಲೂ ಪಾರಾಗಿ ಅಭಿವೃದ್ಧಿಯತ್ತ ದಾಪುಗಾಲಿರಿಸುತ್ತಿದೆ. ಹಿಂದಿನ ಹಲವು ವರ್ಷಗಳಲ್ಲಿ ದೇಶದಲ್ಲಿದ್ದ ಬಡತನದಿಂದ 7 ಕೋಟಿ ಜನರನ್ನು ಹೊರತಂದಿದ್ದು ಅವರೀಗ ಜೀವನ ಶೈಲಿಯಲ್ಲಿ ಬದಲಾವಣೆ ಕಂಡು ಮಧ್ಯಮವರ್ಗದವರಾಗಿದ್ದಾರೆ ಎಂದರು.

ಗ್ರಾಮಗ್ರಾಮಗಳಲ್ಲಿ ಇಂದು ಅಂತರ್ಜಾಲ ವಿಸ್ತರಣೆಯಾಗಿದೆ. 6 ಲಕ್ಷ ಕಿ.ಮೀ. ಇದ್ದ  ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಅಂತರ್ಜಾಲದ ವಿಸ್ತಾರ 9 ವರ್ಷಗಳಲ್ಲಿ  13 ಪಟ್ಟು ಬೆಳೆದಿದೆ. ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದರು.

ಮೊಬೈಲ್ ಫೋನ್ ತಯಾರಿಕೆಯಲ್ಲಿ ಪ್ರಸ್ತುತ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದ ಜನ ಗುಣಮಟ್ಟದ ಉತ್ಪನ್ನ, ಸೇವೆ, ಮೂಲಸೌಕರ್ಯ ಬಯಸುತ್ತಿದ್ದು ಅದನ್ನು ಪೂರೈಸಲು ಸರಕಾರ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಬರುವ ವರ್ಷಗಳಲ್ಲಿ ಭಾರತದಲ್ಲಿ ಅನೇಕ ಹೊಸ ನಗರಗಳು ತಲೆಯೆತ್ತಲಿವೆ. ಈ ಮೂಲಕ ಭಾರತದಲ್ಲಿ ಇಂಧನದ ಬೇಡಿಕೆ ಕೂಡ ಹೆಚ್ಚಲಿದೆ. ಅದಕ್ಕೆ ಪೂರಕವಾಗಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ  ಇಂಧನಕ್ಕೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಭಾರತ ಮುಂದಿದೆ. ದೇಶದಲ್ಲಿ ಅಡುಗೆ ಅನಿಲದ ಪೈಪ್ ಲೈನ್ ವಿಸ್ತಾರ 2014ರಲ್ಲಿ ಕೇವಲ 14 ಸಾವಿರ ಕಿ.ಮೀ. ಇತ್ತು. ಅದೀಗ 22 ಸಾವಿರ ಕಿ.ಮೀ.ಗೆ ಹೆಚ್ಚಿಸಲಾಗಿದೆ.  ಮುಂಬರುವ ನಾಲ್ಕೈದು ವರ್ಷಗಳಲ್ಲಿ ಅದನ್ನು 35 ಸಾವಿರ ಕಿ.ಮೀ.ಗೆ ವಿಸ್ತರಿಸಲಾಗುತ್ತಿದೆ.

ಮುಂಬರುವ  2-3ವರ್ಷಗಳಲ್ಲಿ 3 ಕೋಟಿ ಅಡುಗೆ ಮನೆಗಳಿಗೆ ಸೋಲಾರ್ ಒಲೆ ವ್ಯವಸ್ಥೆ ಕಲಲ್ಪಿಸುವ ಮೂಲಕ ಅಡುಗೆ ಮನೆಯಲ್ಲಿ ಕ್ರಾಂತಿ ಮಾಡಲಾಗುವುದು.

ಭಾರತ ಇಂಧನ ಉತ್ಪಾದನೆಯಲ್ಲಿ ಜಗತ್ತಿನ 4ನೇ ಬಹುದೊಡ್ಡ ಸಂಪನ್ಮೂಲ ಹೊಂದಿದೆ. ಅದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಸಿರು ಇಂಧನವನ್ನು 170 ಗೀಗಾವ್ಯಾಟ್ ಗೆ ಏರಿಸಲಾಗುವುದು. ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣದ ಪ್ರಮಾಣ ಹೆಚ್ಚಿಸಲಾಗುವುದಲ್ಲದೆ, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ, ಬಳಕೆ ಹೆಚ್ಚಿಸುವ ಮೂಲಕ ಕಾರ್ಬನ್ ಮುಕ್ತ ಪರಿಸರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮೋದಿ ಹೇಳಿದರು.

ಇದೇ ವೇಳೆ ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ಪೀಡಿತರ ಪರ ಸಾಂತ್ವನ ವ್ಯಕ್ತಪಡಿಸಿದ ಪ್ರಧಾನಿ ಸಂತ್ರಸ್ತರ ಪರ ಭಾರತ ಸದಾ ಇದೆ ಎಂದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಗ್ನ ಸ್ಥಿತಿಯಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿ

https://pragati.taskdun.com/a-student-commits-suicide-naked-in-hostel/

ವಿಮಾನದಲ್ಲಿ ಯೆರ್ರಾಬಿರ್ರಿ ಬಡಿದಾಡಿದ ಮಹಿಳಾಮಣಿಗಳು

https://pragati.taskdun.com/women-beads-fought-on-the-plane/

*ಮಹಾಶಿವರಾತ್ರಿ ಮಹೋತ್ಸವ; ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*

https://pragati.taskdun.com/mahashivaratri-mahotsavanidasosiduradundishwara-sidda-samstana/

Related Articles

Back to top button