
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರ ರಾಜ್ಯ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಲು ಕಾರಣವಾಗಿದ್ದು, ಮಾರ್ಚ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಚಿವಾಕಾಂಕ್ಷಿಗಳು ಮಾರ್ಚ್ ನಲ್ಲಿ ಬೇಡ ಸಂಪುಟ ವಿಸ್ತರಣೆ ಈಗಲೇ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸದ್ಯಕ್ಕೆ ನಾಲ್ಕು ಸ್ಥಾನಗಳು ಖಾಲಿ ಇದೆ. ಅದನ್ನು ಯಾವಾಗ ಭರ್ತಿ ಮಾಡಬೇಕು ಎಂಬುದು ವರಿಷ್ಠರಿಗೆ ಗಮನಕ್ಕಿದೆ. ಹೈಕಮಾಂಡ್ ನನ್ನನ್ನು ಕರೆದು ಮಾತಾಡಿದಾಗ ಎಲ್ಲ ವಿವರ ನೀಡುತ್ತೇನೆ ಎಂದರು.
ಇನ್ನು ನಿಗಮ ಮಂಡಳಿ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಪಕ್ಷದ ನಾಯಕರೆಲ್ಲ ಚರ್ಚಿಸಿ ಬಳಿಕ ಪ್ರಸ್ತಾವನೆ ಸಲ್ಲಿಸುತ್ತಾರೆ. ಜನವರಿ 25ರಂದು ಕೋವಿಡ್ ಸಭೆ ಕುರಿತು ಇದೆ. ಇಂದು ಬಿಬಿಎಂಪಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ