Kannada NewsKarnataka News

ಕರಿಮಣಿ ಮಾಲಿಕನನ್ನು ಬಿಟ್ಟು ಬೇರೆ ಪುರುಷನ ಜೊತೆ ಮಹಿಳೆ ಸಹವಾಸ: ಕೈ ಕೊಟ್ಟು ಪರಾರಿಯಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ : ರೀಲ್ಸ್ ನಲ್ಲಿ ಪರಿಚಯವಾದವನ ಜತೆಗೆ ಸಲುಗೆ ಮಾಡಿದ ಮಹಿಳೆಗೆ ಮದುವೆ ಆಗ್ತಿನಿ ಅಂತಾ ಬಂದವನಿಂದ ದೋಖಾ ಆಗಿರುವ ಆರೋಪ ಕೇಳಿ ಬಂದಿದೆ.‌

ವ್ಯಕ್ತಿ ಓರ್ವ ಮದುವೆ ಆಗುವದಾಗಿ ನಂಬಿಸಿದ್ದಾನೆ. ಯಾವಾಗ ಆ ವ್ಯಕ್ತಿ ಕೈ ಕೊಟ್ಟು ಪರಾರಿ ಆಗಿದ್ದಾನೋ ಆಗ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದರೆ ಪೊಲೀಸ್ ಠಾಣೆಗೆ ಒಂದು ವರ್ಷ ಅಲೆದರು ನ್ಯಾಯ ಸಿಗ್ತಿಲ್ಲ ಎಂದು ಮಹಿಳೆ
ರಾಮಮೂರ್ತಿನಗರ ಪೊಲೀಸರ ಮೇಲೆ ಆರೋಪ ಮಾಡಿದ್ದಾಳೆ.

Home add -Advt

2019 ರಲ್ಲಿ ರಾಧಿಕಾಗೆ ರೀಲ್ಸ್ ನಲ್ಲಿ ತಮಿಳುನಾಡು ಮೂಲದ ಪರಮಶಿವಮ್ ಪರಿಚಯವಾಗಿತ್ತು.‌ ಮದುವೆ ಆಗ್ತೀನಿ ಎಂದು ನಂಬಿಸಿದ್ದ ಪರಮಶಿವಮ್ ಎಂಬ ವ್ಯಕ್ತಿ, ಕಾರು ಖರೀದಿಸಿ ಕಂಪನಿಗೆ ಬಿಟ್ಟರೆ ಒಳ್ಳೆ ಹಣ ಬರುತ್ತೆ ಎಂದು ನಂಬಿಸಿದ್ದ. ಅದ್ರಂತೆ ರಾಧಿಕಾ ಬಳಿಯಿಂದ ಹಂತ ಹಂತವಾಗಿ 6 ಲಕ್ಷ ಪಡೆದಿದ್ದ, ಹಣ ಪಡೆದು ತಮಿಳುನಾಡಿಗೆ ಹೋದವನು ವಾಪಸ್ಸು ಆಗಲೇ ಇಲ್ಲ. ತಮಿಳುನಾಡಿನಲ್ಲಿ ಪರಮಶಿವಮ್ ಬೇರೊಂದು ಮದುವೆ ಆಗಿರೋದು ಕೂಡಾ ಬೆಳಕಿಗೆ ಬಂದಿದೆ.‌

ತನಗೆ ಮೋಸ ಆಗಿರುವದಾಗಿ ಗೊತ್ತಾಗಿ ರಾಧಿಕಾ ರಾಮಮೂರ್ತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ಪರಮಶಿವಮ್ ಹಾಗೂ ತಂಡದಿಂದ ರಾಧಿಕಾ ಬಗ್ಗೆ ರೀಲ್ಸ್ ಮಾಡಿ‌ ನಿಂದನೆ ಕೂಡ ಮಾಡಲಾಗಿದೆ. ಈ ವಿಚಾರವಾಗಿ ರಾಧಿಕಾ ಆರು ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾಳೆ.

Related Articles

Back to top button