Latest

ಈವರೆಗೆ ಭಾರತದಲ್ಲಿ ಕೊವಿಡ್ ಗೆ ಬಲಿಯಾದವರ ಸಂಖ್ಯೆ ಗೊತ್ತೆ?

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ವರುಣನ ಆರ್ಭಟದ ನಡುವೆ ಕೊರೊನಾ ಅಟ್ಟಹಾಸವೂ ಮುಂದುವರೆದಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 55 ಲಕ್ಷ ಗಡಿದಾಟಿದ್ದು, ಕಳೆದ 24 ಗಂಟೆಯಲ್ಲಿ 75,083 ಜನರಲ್ಲಿ ಸೋಂಕು ಪತ್ತೆಯಾಗಿದೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55,62,664ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕಳೆದ ಒಂದೇ ದಿನದಲ್ಲಿ ಮಹಾಮಾರಿಗೆ 1,053 ಜನರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 88,935ಕ್ಕೆ ಏರಿಕೆಯಾಗಿದೆ.

Home add -Advt

ದೇಶದಲ್ಲಿ 9,75,861 ಕೊವಿಡ್ ಸಕ್ರಿಯ ಪ್ರಕರಣಗಳಿದ್ದು, 44,97,868 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ 9,33,185 ಜನರಲ್ಲಿ ಕೊವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಈ ವರೆಗೆ 6,53,25,779 ಜನರಲ್ಲಿ ಕೊವಿಡ್ ಟೆಸ್ಟ್ ಮಾಡಲಾಗಿದೆ ಎಂದು ಐಸಿಎಂ ಆರ್ ತಿಳಿಸಿದೆ.

Related Articles

Back to top button