Latest

ಹುಬ್ಬಳ್ಳಿ : ಖ್ಯಾತ ವಾಸ್ತು ತಜ್ಞ, ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ, ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಹುಬ್ಬಳ್ಳಿಯ ಹೋಟೆಲ್ ನಲ್ಲಿ ನಡೆದಿದೆ.

ಹುಬ್ಬಳ್ಳಿಯ ಉಣಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಈ ದುರಂತ ಸಂಭವಿಸಿದೆ. ಹೋಟೆಲ್ ನ ರಿಸೆಪ್ಶನ್ ನಲ್ಲಿಯೇ ಚಂದ್ರಶೇಖರ್ ಗುರೂಜಿಯವರನ್ನು ಕೊಲೆ ಮಾಡಲಾಗಿದೆ.

ಹೋಟೆಲ್ ಗೆ ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಗುರೂಜಿಯವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿ ಗುರೂಜಿಯವರ ಕಾಲಿಗೆ ಬಿದ್ದು ನಮಸ್ಕರಿಸುವ ನೆಪದಲ್ಲಿ ಬಾಗಿದ್ದಾನೆ. ತಕ್ಷಣ ಎದ್ದು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಮಧ್ಯಾಹ್ನ 12.23 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಅವರ ಮೃತದೇಹವನ್ನು ಕಿಮ್ಸ್ ಗೆ ಒಯ್ಯಲಾಗಿದೆ. 50ಕ್ಕೂ ಹೆಚ್ಚು ಬಾರಿ ಚುಚ್ಚಿ ಚುಚ್ಚಿ ಕೊಲ್ಲಲಾಗಿದೆ.

 

Related Articles

Back to top button