Belagavi NewsBelgaum NewsCrimeKannada NewsKarnataka News

*ಪೊಲೀಸರಿಗೆ ತಲೆನೋವಾಗಿದ್ದ ಮನೆಗಳ್ಳ ಕೊನೆಗೂ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಶಹಾಪೂರ ಭಾರತನಗರದಲ್ಲಿ ಮನೆ ಕೀಲಿ ಮುರಿದು ಒಳನುಗ್ಗಿ ಬಂಗಾರದ ಆಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಶಹಾಪೂರ ಪೊಲೀಸರು,  45.56 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.

ದೆಹಲಿಯ ತಿಲಕ ನಗರದ ನಿವಾಸಿ, ಮಿಂಟು ಅಲಿಯಾಸ್ ಚಿಂಟು ಕುಟಿ ವಿಶ್ವಾಸ (52) ಬಂಧಿತ. ಬಂಧಿತನಿಂದ‌ 294.190 ಗ್ರಾಂ ತೂಕದ ಅಂದಾಜು 44,86,390 ರೂ.ಮೌಲ್ಯದ ಗಟ್ಟಿ ಬಂಗಾರ ಹಾಗೂ ಕಳ್ಳತನಕ್ಕೆ ಬಳಸಿದ್ದ 70 ಸಾವಿರ ರೂ.ಮೌಲ್ಯದ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 45,56,390 ರೂ.ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Home add -Advt

ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಎಸ್.ಎಸ್. ಸಿಮಾನಿ, ಪಿಎಸ್‌ಐ ಮಣಿಕಂಠ ಪೂಜಾರಿ, ಪ್ರವೀಣ ಬಿರಾದಾರ, ಮಂಜುನಾಥ ಭಜಂತ್ರಿ ಸೇರಿದಂತೆ ಶಾಹಾಪುರ ಠಾಣೆ ಸಿಬ್ಬಂದಿ ಪಾಲ್ಗೊಂಡಿದ್ದರು.

Related Articles

Back to top button