Kannada NewsKarnataka NewsLatest

ಬೈಕ್ ಅಪಘಾತದಲ್ಲಿ ಇಬ್ಬರು ಯುವಕರ ಸಾವು

ಪ್ರಗತಿವಾಹಿನಿ ಸುದ್ದಿ, ಧಾರವಾಡ: ಶ್ರಾವಣ ಮಾಸದ ಪೂಜೆಗಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದ ಇಬ್ಬರು ಬೈಕ್ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬೇಲೂರು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೋಟೂರು ಗ್ರಾಮದ ನಾಗರಾಜ ಪರಕಳ್ಳಿ ಮತ್ತು ಗಂಗಾಧರ ಹೊಸವಾಳ ಮೃತಪಟ್ಟವರು.

Home add -Advt

ಇವರಿಬ್ಬರೂ ಬೈಕ್ ನಲ್ಲಿ ನರೇಂದ್ರ ಗ್ರಾಮದ ಬಳಿಯ ಗುಡ್ಡದ ಬಸವಣ್ಣನ ಗುಡಿಗೆ ಪೂಜೆ ಸಲ್ಲಿಸಲು ಬೈಕ್ ನಲ್ಲಿ ತೆರಳುತ್ತಿದ್ದರು. ಬೈಕ್ ನಿಯಂತ್ರಣ ತಪ್ಪಿ ಮೃತಪಟ್ಟಿದ್ದಾರೋ, ಅಥವಾ ಇನ್ನಾವುದೇ ವಾಹನ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿತೋ ಎಂಬುದು ತಿಳಿದುಬಂದಿಲ್ಲ.

ಗರಗ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.

Related Articles

Back to top button