ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ : 71 ಜನರ ಸಮಿತಿ ರಚಿಸಿದ ಕೆಪಿಸಿಸಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು ನೂರು ವರ್ಷವಾದ ಹಿನ್ನೆಲೆಯಲ್ಲಿ ಅದರ ಸ್ಮರಣೆಗಾಗಿ ಸಂಭ್ರಮಾಚರಣೆಯನ್ನು ವಿಶೇಷವಾಗಿ ಆಚರಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 71 ಸದಸ್ಯರ ಸಮಿತಿ ರಚಿಸಿದೆ.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೋಯ್ಲಿ ಗೌರವಾಧ್ಯಕ್ಷರಾಗಿದ್ದು, ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷರಾಗಿದ್ದಾರೆ. ಬಿ.ಎಲ್.ಶಂಕರ ಸಂಚಾಲಕರಾಗಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಸದಾಕಾಲ ನೆನೆಯಬಹುದಾದ ಮಹತ್ವದ ಸಂದರ್ಭವೆಂದರೆ ಅದು 1924ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ “ಕಾಂಗ್ರೆಸ್ ಅಧಿವೇಶನ”, ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನೆಡೆದ ಏಕೈಕ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. ಇದು ಕಾಂಗ್ರೆಸ್ ಇತಿಹಾಸದಲ್ಲಿ ಒಂದು ವಿಶೇಷ ಅಧ್ಯಾಯವಾಗಿದೆ. ಈ ಅಧಿವೇಶನವು ಸ್ವಾಂತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವನ್ನು ವಹಿಸಿತ್ತು. ಈಗ ಈ ಅಧಿವೇಶನಕ್ಕೆ ಶತಮಾನದ ಸಂಭ್ರಮ. ಇದರ ಸವಿನೆನಪಿಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆಯನ್ನು ವಿಶೇಷವಾಗಿ ಆಚರಿಸಲು ಉದ್ದೇಶಿಸಿವೆ.
ಮಹಾತ್ಮ ಗಾಂಧೀಯವರ ಆದರ್ಶ, ಕಾಂಗ್ರೆಸ್ ಪಕ್ಷದ ನೇತ್ರತ್ವದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ಸಿಗರ ತ್ಯಾಗ- ಬಲಿದಾನಗಳನ್ನು ಇಂದಿನ ಯುವಜನತೆಗೆ ತಿಳಿಯಪಡಿಸುವ ರೀತಿಯಲ್ಲಿ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬರಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಈ ಸಮಾರಂಭವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ “ಬೆಳಗಾವಿ ಅಧಿವೇಶನ ಶತಮಾನೋತ್ಸವ ಸಮಿತಿ”ಯನ್ನು ಕೆಳಕಂಡ ಸಮಿತಿ ಮುಖಂಡರುಗಳನ್ನೊಳಗೊಂಡಂತೆ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಗೌರವ ಅಧ್ಯಕ್ಷರು: – ವೀರಪ್ಪ ಮೊಯಿಲಿ, ಮಾಜಿ ಮುಖ್ಯಮಂತ್ರಿಗಳು
ಅಧ್ಯಕ್ಷರು: ಶ್ರೀ ಹೆಚ್. ಕೆ. ಪಾಟೀಲ್, ಮಾನ್ಯ ಸಚಿವರು
ಸಂಚಾಲಕರು: ಶ್ರೀ ಬಿ.ಎಲ್. ಶಂಕರ್, ಮಾಜಿ ಅಧ್ಯಕ್ಷರು, ವಿಧಾನ ಪರಿಷತ್
ಸದಸ್ಯರು:
1. ಶ್ರೀ ರಾಮಲಿಂಗ ರೆಡ್ಡಿ, ಮಾನ್ಯ ಸಚಿವರು
2. ಶ್ರೀ. ಕೆ.ಜೆ. ಜಾರ್ಜ್, ಮಾನ್ಯ ಸಚಿವರು,
3. ಶ್ರೀ ಎಂ.ಬಿ. ಪಾಟೀಲ್, ಮಾನ್ಯ ಸಚಿವರು
4. ಶ್ರೀ ಕೆ.ಎಚ್. ಮುನಿಯಪ್ಪ, ಮಾನ್ಯ ಸಚಿವರು
5. ಶ್ರೀ ಈಶ್ವರ್ ಖಂಡ್ರೆ, ಮಾನ್ಯ ಸಚಿವರು
6. ಶ್ರೀ ಬಿ.ಕೆ. ಹರಿಪ್ರಸಾದ್, ಸಿ. ಡಬ್ಲ್ಯು.ಸಿ. ವಿಶೇಷ ಆಹ್ವಾನಿತರು, ಎಐಸಿಸಿ
7. ಶ್ರೀ ವಿನಯಕುಮಾರ್ ಸೊರಕೆ, ಅಧ್ಯಕ್ಷರು, ಕೆಪಿಸಿಸಿ ಪ್ರಚಾರ ಸಮಿತಿ
8. ಶ್ರೀ ಎನ್.ಎಸ್. ಭೋಸರಾಜು, ಮಾನ್ಯ ಸಚಿವರು
9. ಶ್ರೀ ಕೆ.ರಹಮಾನ್ ಖಾನ್, ಮಾಜಿ ಕೇಂದ್ರ ಸಚಿವರು
10. ಶ್ರೀ ಹೆಚ್.ಸಿ.ಮಹದೇವಪ್ಪ, ಮಾನ್ಯ ಸಚಿವರು
11. ಶ್ರೀ ಸತೀಶ್ ಜಾರಕಿಹೊಳಿ, ಮಾನ್ಯ ಸಚಿವರು
12. ಶ್ರೀ ಚೆಲುವರಾಯ ಸ್ವಾಮಿ, ಮಾನ್ಯ ಸಚಿವರು
13. ಶ್ರೀ ಕೃಷ್ಣ ಬೈರೇಗೌಡ, ಮಾನ್ಯ ಸಚಿವರು
14. ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್, ಮಾನ್ಯ ಸಚಿವರು
15. ಶ್ರೀ ಶಿವರಾಜ್ ತಂಗಡಗಿ, ಮಾನ್ಯ ಸಚಿವರು
16. ಶ್ರೀ ಪಿಯಾಂಕ್ ಖರ್ಗೆ, ಮಾನ್ಯ ಸಚಿವರು
17. ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್, ಮಾನ್ಯ ಸಚಿವರು
18. ಶ್ರೀ ಬಿ.ಝಡ್. ಜಮೀರ್ ಅಹಮ್ಮದ್, ಮಾನ್ಯ ಸಚಿವರು
19. ಡಾ: ಎಂ.ಸಿ. ಸುಧಾಕರ್. ಮಾನ್ಯ ಸಚಿವರು
20. ಶ್ರೀ ಮಧು ಬಂಗಾರಪ್ಪ, ಮಾನ್ಯ ಸಚಿವರು
21. ಶ್ರೀ ಲಕ್ಷ್ಮಣ ಸವದಿ, ಶಾಸಕರು, ಮಾಜಿ ಉಪ ಮುಖ್ಯಮಂತ್ರಿ
22. ಶ್ರೀ ನಸೀರ್ ಆಹಮ್ಮದ್, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
23. ಶ್ರೀ ಸಲೀಂ ಅಹಮ್ಮದ್, ಮುಖ್ಯ ಸಚೇತಕರು, ವಿಧಾನ ಪರಿಷತ್ತು
24. ಶ್ರೀ ಬಿ.ಎನ್.ಚಂದ್ರಪ್ಪ, ಮಾಜಿ ಕೆಪಿಸಿಸಿ ಕಾರ್ಯಧ್ಯಕ್ಷರು
25. ಶ್ರೀ ಸಿ.ಎಸ್. ನಾಡಗೌಡ, ಶಾಸಕರು
26. ಶ್ರೀ ಎನ್.ಎ. ಹ್ಯಾರಿಸ್, ಶಾಸಕರು
27. ಶ್ರೀ ಡಿ.ಕೆ.ಸುರೇಶ್, ಮಾಜಿ ಲೋಕಸಭಾ ಸದಸ್ಯರು
28. ಡಾ: ಎಲ್. ಹನುಮಂತಯ್ಯ, ಮಾಜಿ ರಾಜ್ಯಸಭಾ ಸದಸ್ಯರು
29. ಶ್ರೀ ಡಿ.ಆರ್. ಪಾಟೀಲ್, ಮಾನ್ಯ ಶಾಸಕರು
30. ಶ್ರೀ ರಮೇಶ್ ಕುಮಾರ್, ಮಾಜಿ ಸಭಾಪತಿ
31. ಶ್ರೀಮತಿ ಮೋಟಮ್ಮ, ಮಾಜಿ ಸಚಿವರು
32. ಶ್ರೀಮತಿ ರಾಣಿ ಸತೀಶ್, ಮಾಜಿ ಸಚಿವರು
33. ಶ್ರೀ ಹೆಚ್. ಹನುಮಂತಪ್ಪ, ಮಾಜಿ ಸಂಸದರು
34. ಶ್ರೀ ವಿ. ಆರ್. ಸುದರ್ಶನ್, ಮಾಜಿ ಅಧ್ಯಕ್ಷರು, ವಿಧಾನ ಪರಿಷತ್ತು
35. ಶ್ರೀ ಪ್ರಕಾಶ್ ಹುಕ್ಕೇರಿ, MLC, ಮಾಜಿ ಸಚಿವರು
36. ಶ್ರೀ ಬಿ.ಆರ್. ಪಾಟೀಲ್, ಶಾಸಕರು
37. ಶ್ರೀ ಎಸ್. ಆರ್. ಪಾಟೀಲ್, ಮಾಜಿ ವಿರೋಧಪಕ್ಷದ ನಾಯಕರು, ವಿಧಾನಪರಿಷತ್
38. ಶ್ರೀ ಪಿ.ಎಂ. ಅಶೋಕ್, ಶಾಸಕರು
39. ಶ್ರೀ ಮಹಾಂತೇಶ್ ಕೌಜಲಗಿ, ಶಾಸಕರು
40. ಶ್ರೀ ಫಿರೋಜ್ ಸೇರ್, ಮಾಜಿ ಶಾಸಕರು
41. ಶ್ರೀ ಬಿ.ಜಿ. ಗೋವಿಂದಪ್ಪ, ಶಾಸಕರು
42. ಶ್ರೀ ಚನ್ನರಾಜ್ ಹಟ್ಟಿಹೊಳಿ, ವಿಧಾನಪರಿಷತ್ ಸದಸ್ಯರು
43. ಶ್ರೀ ಜೆ.ಆರ್.ಲೋಬೋ, ಮಾಜಿ ಶಾಸಕರು
44. ಶ್ರೀ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕರು
45. ಶ್ರೀ ಪ್ರಕಾಶ್.ಕೆ. ರಾಥೋಡ್, ವಿಧಾನ ಪರಿಷತ್ತು ಸದಸ್ಯರು
46. ಶ್ರೀ ದಿನೇಶ್ ಗೂಳಿಗೌಡ, ಶಾಸಕರು
47. ಡಾ: ತಿಮ್ಮಯ್ಯ, ಶಾಸಕರು,
48. ಶ್ರೀ ಮುದ್ದಹನುಮೇಗೌಡ, ಮಾಜಿ, ಸಂಸದರು
49. ಶ್ರೀ ಕೆ. ಉದಯ್, ಶಾಸಕರು
50. ಎ.ಎಂ.ಹಿಂಡಸಗೇರಿ, ಮಾಜಿ ಸಚಿವರು
51. ಡಾ: ಅಂಜಲಿ ನಿಂಬಾಳ್ಳರ್, ಮಾಜಿ ಶಾಸಕರು
52. ಶ್ರೀ ಶಕೀರ್ ಸನದಿ, ಅಧ್ಯಕ್ಷರು, ಹುಡ
53. ಪ್ರೊ. ಶಿವರಾಜ್ – ಗಾಂಧಿ ಭವನ
54. ಶ್ರೀ ತುಳಸಿ
55. ಶ್ರೀ ನಾಗರಾಜ ಗೌಡ, ಶಿವಮೊಗ್ಗ
56. ಶ್ರೀ ಎಸ್. ಜಿ. ನಂಜಯ್ಯನ ಮಠ, ಅಧ್ಯಕ್ಷರು, ಡಿಸಿಸಿ
57. ಶ್ರೀ ಲಕ್ಷ್ಮಣರಾವ್ ಚಿಂಗಳೆ, ಅಧ್ಯಕ್ಷರು, ಡಿಸಿಸಿ
58. ಶ್ರೀಮತಿ ರಾಜೇಶ್ವರಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ
59. ಶ್ರೀ ನಿಖೇತ್ ರಾಜ್ ಮೌರ್ಯ, ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ
60. ಶ್ರೀ ಮೊಹಮ್ಮದ್ ನಲಪಾಡ್, ಅಧ್ಯಕ್ಷರು, ರಾಜ್ಯ ಯುವ ಕಾಂಗ್ರೆಸ್
61. ಶ್ರೀಮತಿ ಪುಷ್ಪ ಅಮರನಾಥ್, ಅಧ್ಯಕ್ಷರು, ರಾಜ್ಯ ಮಹಿಳಾ ಕಾಂಗ್ರೆಸ್ 62. ಶ್ರೀ ದೀಪಕ್ ತಿಮ್ಮಯ್ಯ, ಮಾನ್ಯ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ
63. ಶ್ರೀಮತಿ ಕಮಲಾಕ್ಷಿ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಕಪಿಸಿಸಿ
64. ಶ್ರೀಮತಿ ಪುಷ್ಪ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ, ಕೆಪಿಎಂಸಿ
65. ಶ್ರೀ ಸುದೀರ್ ಕುಮಾರ್ ಮುರೊಳ್ಳಿ, ವಕ್ತಾರರು, ಕೆಪಿಸಿಸಿ
66. ಶ್ರೀ ಕೀರ್ತಿ ಗಣೇಶ್, ಅಧ್ಯಕ್ಷರು ಎನ್.ಎಸ್.ಯು.ಐ.
67. ಅಧ್ಯಕ್ಷರು ಸಮಾಜಿಕ ಜಾಲತಾಣ ವಿಭಾಗ
68. ಅಧ್ಯಕ್ಷರು ಪಂಚಾಯತ್ ರಾಜ್ ಸಂಘಟನೆ ವಿಭಾಗ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ