Kannada NewsKarnataka NewsLatest

*ಚೈತ್ರಾ ಕುಂದಾಪುರಗೆ ಮೂರ್ಛೆ ರೋಗ…! ಕುಸಿದು ಬಿದ್ದ ಆರೋಪಿ ಬಾಯಲ್ಲಿ ನೊರೆ…ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಒಬ್ಬರಿಗೆ 5 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ವಿಚರಣೆಗೂ ಮುನ್ನವೇ ಮೂರ್ಛೇ ಹೋಗಿದ್ದು, ಅವರು ಮೂರ್ಛೇ ರೋಗದಿಂದ ಬಳಲುತ್ತಿರುವ ಮಾಹಿತಿ ಬಹಿರಂಗವಾಗಿದೆ.

ಸಿಸಿಬಿ ಕಚೇರಿಯಲ್ಲಿ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ವೇಳೆಯೂ ಏಕಾಏಕಿ ಕುಸಿದು ಬಿದ್ದಿದ್ದ ಚೈತ್ರಾ ಕುಂದಾಪುರ ಅಸ್ವಸ್ಥರಾಗಿದ್ದರು. ವಿಚಾರಣೆ ಬಳಿಕ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇಂದು ಮೂರನೆ ದಿನದ ವಿಚರಣೆಗಾಗಿ ಸಿಸಿ ಕಛೆರ‍ಿಗೆ ಹಾಜರಾಗಬೇಕಿತ್ತು. ಆದರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಚೈತ್ರಾ ಕುಂದಾಪುರ, ಮತ್ತೆ ಮೂರ್ಛೆ ಹೋಗಿದ್ದು, ಆಕೆಯ ಬಾಯಿಯಲ್ಲಿ ನೊರೆ ಕೂಡ ಕಾಣಿಸಿಕೊಂಡಿದೆ.

Home add -Advt

ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಹಾಗೂ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಕುಟುಂಬದ ಮಾಹಿತಿ ಪ್ರಕಾರ ಚೈತ್ರಾ ಕುಂದಾಪುರ ಹಿಂದಿನಿಂದಲೂ ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

Related Articles

Back to top button