National

*ಅಥ್ಲೀಟ್ ಮೇಲೆ 60ಕ್ಕೂ ಹೆಚ್ಚು ಜನರಿಂದ ಲೈಂಗಿಕ ಕಿರುಕುಳ: 15 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ: ಅಥ್ಲೀಟ್ ಮೇಲೆ ನಿರಿಂತರ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 60 ಕ್ಕೂ ಹೆಚ್ಚು ಜನರ ವಿರುದ್ಧ ತನಿಖೆ ನಡೆಸಿರುವ ಪೊಲೀಸರು 15 ಜನರನ್ನು ಅರೆಸ್ಟ್ ಮಾಡಿದ್ದಾರೆ.‌

ಈ ಘಟನೆ ಕೇರಳದ ಪಟ್ಟಣಂತಿಟ್ಟನಲ್ಲಿ ನಡೆದಿದ್ದು, ಯುವತಿಯ ಕೋಚ್, ಸಹ ಅಶ್ಲೀಟ್, ಕ್ರೀಡಾಳುಗಳ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ. ಅವರಲ್ಲಿ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ 13 ವರ್ಷದಲ್ಲಿದ್ದಾಗಲೆ ನೆರೆಮನೆ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾಳೆ. ಆತ ಒತ್ತಾಯ ಪೂರ್ವಕವಾಗಿ ಅಶ್ಲೀಲ ವೀಡಿಯೊ ನೋಡುವಂತೆ ಮಾಡುತ್ತಿದ್ದ ಎಂದು ಪೊಲೀಸರ ಬಳಿ ತಿಳಿಸಿದ್ದಾಳೆ. ಮಕ್ಕಳ ಕಲ್ಯಾಣ ಸಮಿತಿಗೆ ಯುವತಿ ಮೊದಲು ದೂರು ನೀಡಿದ್ದಾಳೆ. ನಂತರ ಸಮಿತಿಯವರು ಪೊಲೀಸರಿಗೆ ತಿಳಿಸಿ, ಕ್ರಮ ಕೈಗೊಳ್ಳುವಂತೆ ಮಾಡಿದ್ದಾರೆ. 62 ಮಂದಿ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

Related Articles

Back to top button