*ದೇವಸ್ಥಾನ ಕಮಿಟಿಗೆ ಚೆಕ್ ಹಸ್ತಾಂತರಿಸಿದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಚಂದನಹೊಸೂರ್ ಗ್ರಾಮದಲ್ಲಿ ಸುಮಾರು 1.50 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಮೊದಲ ಹಂತದ 19.60 ಲಕ್ಷ ರೂ,ಗಳ ಚೆಕ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ದೇವಸ್ಥಾನದ ಟ್ರಸ್ಟ್ ಕಮಿಟಿಯವರಿಗೆ ಗುರುವಾರ ಹಸ್ತಾಂತರಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಆಸಕ್ತಿವಹಿಸಿ ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಅನುದಾನ ಒದಗಿಸಿದ್ದಾರೆ. ಎಲ್ಲೆಡೆ ಅತ್ಯಂತ ಸುಂದರವಾದ ದೇವಸ್ಥಾನ ನಿರ್ಮಾಣವಾಗುವಂತೆ ಮಾಡಿದ್ದಾರೆ. ದೇವಸ್ಥಾನದ ಜೊತೆಗೆ, ಸಮುದಾಯ ಭವನ, ಕಲ್ಯಾಣ ಮಂಟಪ ಮೊದಲಾದವುಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. ನಾವೆಲ್ಲರೂ ಲಕ್ಷ್ಮೀ ಹೆಬ್ಬಾಳಕರ್ ಅವರ ಕೈ ಬಲಪಡಿಸಲು ಸದಾ ಅವರ ಜೊತೆಗೆ ನಿಲ್ಲಬೇಕು ಎಂದು ಚನ್ನರಾಜ ಹಟ್ಟಿಹೊಳಿ ಗ್ರಾಮಸ್ಥರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಮಹೇಶ ಹಿರೇಮಠ್, ಅಡಿವೆಪ್ಪ ಪಾಟೀಲ, ಪ್ರಶಾಂತ ಪಾಟೀಲ, ಯಲ್ಲಪ್ಪ ಪಾಟೀಲ, ಶಂಕರಗೌಡ ಪಾಟೀಲ, ನಾಗಲಿಂಗ ಬಡಿಗೇರ್, ರಾಯಪ್ಪ ತವಗದ, ಬಸವರಾಜ ಕರಡಿಗುದ್ದಿ, ರುದ್ರಪ್ಪ ತಾರಿಹಾಳ, ಶಿವಲಿಂಗ ಕರಬಣ್ಣವರ, ನಾಗಪ್ಪ ಪಾರ್ವತಿ, ಅಡಿವೆಪ್ಪ ತವಗದ, ಅಶೋಕ ಕುಂದರಗಿ, ವೀರಭದ್ರ ಕರಡಿಗುದ್ದಿ, ರಮೇಶ ಸಿದ್ದಾಪುರ ಹಾಗೂ ಚಂದ್ರಪ್ಪ ಪಾಟೀಲ ಉಪಸ್ಥಿತರಿದ್ದರು.