
ಪ್ರಗತಿವಾಹಿನಿ ಸುದ್ದಿ; ಚೆನ್ನೈ: ದಕ್ಷಿಣ ಭಾರತದ ಖ್ಯಾತ ಸ್ಟಾರ್ ದಂಪತಿ, ರಾಜಕಾರಣಿ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್ ಅವರಿಗೆ ವಿಶೇಷ ನ್ಯಾಯಾಲಯ 1 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್ ಅವರ ನಿರ್ಮಾಣ ಸಂಸ್ಥೆ 2015ರಲ್ಲಿ ‘ಇದು ಎನ್ನಮಾಯಂ’ ಎಂಬ ಚಿತ್ರ ನಿರ್ಮಾಣಕ್ಕಾಗಿ ರೇಡಿಯಂಟ್ ಗ್ರೂಪ್ ನಿಂದ ಸಾಲ ಪಡೆದುಕೊಂಡಿತ್ತು. ಆದರೆ ಸಾಲವನ್ನು ಮರುಪಾವತಿ ಮಾಡಿರಲಿಲ್ಲ. ಬಳಿಕ 2018ರಲ್ಲಿ ಶರತ್ ಕುಮಾರ್ ಹಾಗೂ ರಾಧಿಕಾ ರೇಡಿಯೆಂಟ್ ಗ್ರೂಪ್ ಗೆ ಸಾಲ ಮರುಪಾವತಿಗೆಂದು ನೀಡಿದ್ದ ಚೆಕ್ ಬೌನ್ಸ್ ಆಗಿತ್ತು.
ಈ ಹಿನ್ನೆಲೆಯಲ್ಲಿ ರೇಡಿಯಂಟ್ ಗ್ರೂಪ್ ಸ್ಟಾರ್ ದಂಪತಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ಬಳಿಕ ಈಗ ನ್ಯಾಯಾಲಯ ನಟ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್ ಕುಮಾರ್ ಗೆ 1 ವರ್ಷ ಜೈಲುಶಿಕ್ಷೆ ಪ್ರಕಟಿಸಿದೆ.