Latest

ಎರಡೇ ತಾಸುಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ ಇಬ್ಬರು ಬಾಲ್ಯಸ್ನೇಹಿತೆಯರು

ಪ್ರಗತಿವಾಹಿನಿ ಸುದ್ದಿ, ಪುಣೆ: ಬರಿ ಎರಡು ತಾಸುಗಳ ಅವಧಿಯಲ್ಲಿ ಬಾಲ್ಯಸ್ನೇಹಿತೆಯರಿಬ್ಬರು ಆತ್ಮಹತ್ಯೆಗೆ ಶರಣಾಗುವ ಮೂಲಕ ತಮ್ಮ ಜೀವನಕ್ಕೆ ಮುಕ್ತಾಯ ಹಾಡಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಈ ದುರಂತದ ಇಬ್ಬರೂ 19 ವರ್ಷ ವಯಸ್ಸಿನವರು. ಈ ಯುವತಿಯರನ್ನು ಸಾನಿಕಾ ಭಾಗವತ ಹಾಗೂ ಆಕಾಂಕ್ಷಾ ಗಾಯಕವಾಡ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬಾಲ್ಯದಿಂದಲೂ ಸ್ನೇಹಿತೆಯರಾಗಿದ್ದರು. 

Home add -Advt

ಸಾನಿಕಾ ಭಾಗವತ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಆಕೆಯನ್ನು ನೋಡಲು ಆಕಾಂಕ್ಷಾ ಗಾಯಕವಾಡ ಹೋಗಿದ್ದಳು. ಆದರೆ ಸಾನಿಕಾಳ ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಸಾಗಿಸುತ್ತಿದ್ದ ವೇಳೆ ಆಕಾಂಕ್ಷಾ ಐದು ಅಂತಸ್ತುಗಳ ಕಟ್ಟಡದ ಟೆರೇಸ್ ಮೇಲಿಂದ ಜಿಗಿದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸಾನಿಕಾ ಆತ್ಮಹತ್ಯೆ ಮಾಡಿಕೊಂಡ ಬರಿ ಎರಡೇ ತಾಸುಗಳ ಅವಧಿಯಲ್ಲಿ ಆಕಾಂಕ್ಷಾ ಕೂಡ ತನ್ನ ಜೀವನ ಯಾನ ಮುಗಿಸಿಕೊಂಡಿದ್ದಾಳೆ.

ಜಗತ್ತಿನ ಅತ್ಯಂತ ಶ್ರೀಮಂತರಿರುವ ಸ್ಥಳಗಳು ಯಾವವು ಗೊತ್ತಾ?

 

 

Related Articles

Back to top button