
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿವಂಗತ ಬಿ. ಶಂಕರಾನಂದ ರವರ ಜನ್ಮ ಶತಮಾನೋತ್ಸವ ಮಾರ್ಚ್ 19 ರಂದು ಇರುವ ಹಿನ್ನೆಲೆಯಲ್ಲಿ, ಡಿಸೆಂಬರ್ 5, 2024 ರಂದು ನಿಗದಿಪಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ ಪರಿಷತ್ ಸಭೆಯಲ್ಲಿ ಸಂದೀಪ ಜೀರಗ್ಯಾಳ ಇವರು ಕ್ಲಬ್ ರಸ್ತೆಗೆ ಬಿ. ಶಂಕರಾನಂದರವರ ನಾಮಕರಣ ಮಾಡುವ ಕುರಿತು ಪ್ರಸ್ತಾಪಿಸಿದಂತೆ ಗೊತ್ತುವಳಿ ಸಂಖ್ಯೆ. 166 ರನ್ವಯ ಠರಾವು ಅಂಗೀಕರಿಸಲಾಗಿದೆ.
ಆದ್ದರಿಂದ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಡಿ ಬರುವ ಕ್ಲಬ್ ರಸ್ತೆಗೆ ಬಿ. ಶಂಕರಾನಂದರವರ ನಾಮಕರಣ ಮಾಡುವ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಾಗಿ ಆಹ್ವಾನಿಸಿದೆ. ನಗರದ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆ-ಸೂಚನೆಗಳು ಇದ್ದಲ್ಲಿ ಸದರಿ ಪ್ರಕಟಣೆ ಪ್ರಕಟವಾದ 30 ದಿನಗಳೊಳಗಾಗಿ ಈ ಕಾರ್ಯಾಲಯಕ್ಕೆ ಸಲ್ಲಿಸಲು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.