
ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ವಿಜಯಪುರದ ಜ್ಞಾನಯೋಗಾಶ್ರಮದ ಶ್ರಿ ಸಿದ್ದೇಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮತ್ತಿತರರು ಹಾಜರಿದ್ದರು.
ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಬೊಮ್ಮಾಯಿ ಅಲ್ಲಿಂದ ರಸ್ತೆ ಮೂಲಕ ವಿಜಯಪುರ ತಲುಪಿದರು. ಜ್ಞಾನಯೋಗಾಶ್ರಮಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದು, ಆರೋಗ್ಯ ವಿಚಾರಿಸಿದರು.
ಸಿದ್ದೇಶ್ವರ ಶ್ರೀಗಳ ಆರೋಗ್ಯ ಕಳವಳಕಾರಿಯಾಗಿದೆ
ಸಿದ್ದೇಶ್ವರ ಶ್ರೀಗಳ ಆರೋಗ್ಯ ಕಳವಳಕಾರಿಯಾಗಿರುವದರಿಂದ ವಿಚಾರಿಸಲು ನಾನು ಮತ್ತು ಪ್ರಹ್ಲಾದ್ ಜೋಶಿ ಆಗಮಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶ್ರೀಗಳ ದರ್ಶನ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ ಒಂದು ವಾರದಿಂದ ಅವರ ಆರೋಗ್ಯ ವಿಚಾರಿಸುತ್ತಿದ್ದೇನೆ. ಮೊನ್ನೆ ಫೋನ್ ಮಾಡಿದಾಗ ಮಾತನಾಡಲು ಪ್ರಯತ್ನಿಸಿದರು. ಆದರೆ ಮಾತನಾಡಲು ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಫೋನ್ ನಲ್ಲಿ ಅವರೊಂದಿಗೆ ಮಾತನಾಡಿ ಶೀಘ್ರ ಗ9ುಣಮುಖರಾಗಲು ಹಾರೈಸಿದ್ದಾರೆ.
ಇನ್ನಷ್ಟು ಕಾಲ ಅವರು ಬದುಕಬೇಕು. ಹೆಚ್ಚಿನ ಚಿಕಿತ್ಸೆ ಬಗ್ಗೆ ಕೇಳಿದಾಗ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು. ವೈದ್ಯರು ಹೇಗೆ ಸಲಹೆ ನೀಡುತ್ತಾರೆ ಅದರಂತೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಬೊಮ್ಮಾಯಿ ವಿವರಿಸಿದರು.
ಜಟಿಲ ಸಮಸ್ಯೆಗಳಿಗೆ ಅತ್ಯಂತ ಸರಣ ಪರಿಹಾರ ನೀಡುವವರು ಶ್ರೀಗಳು. ಬದುಕನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿದವರು. ನಾನು ಮುಖ್ಯಮಂತ್ರಿಯಾದಾಗ 5 ನಿಮಿಷ ಮಾತನಾಡಿ ಹಾರೈಸಿದ್ದು ನನ್ನ ಮನಸ್ಸಿನಲ್ಲಿ ಸದಾಕಾಲ ಉಳಿಯುವಂತಿದೆ. ಅವರು ಬೇಗ ಗುಣಮುಖರಾಗಲೆಂಬುದು ನಮ್ಮ ಆಶಯ.
ಬಿಪಿ ಸೇರಿದಂತೆ ಎಲ್ಲವೂ ಸಾಮಾನ್ಯವಾಗಿದೆ. ಆಹಾರ ಬಿಟ್ಟಿದ್ದರಿಂದ ತೊಂದರೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಜ್ಞಾನಯೋಗಾಶ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ದಿಢೀರ್ ಭೇಟಿ: ಸಿದ್ದೇಶ್ವರ ಶ್ರೀಗಳ ಭೇಟಿ
https://pragati.taskdun.com/sudden-visit-of-chief-minister-bommai-to-jnanyogashram-visit-of-siddeshwar-sri/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ