ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ರಾಜ್ಯ ರಾಜಕೀಯ ತೀರಾ ಅಸಹ್ಯ ಸ್ಥಿತಿಗೆ ತಲುಪಿದ್ದು, ಇವರು ನಮ್ಮ ಜನಪ್ರತಿನಿಧಿಗಳಾ ಅಥವಾ ಗೂಂಡಾಗಳಾ ಎನ್ನುವ ಪ್ರಶ್ನೆ ಕೇಳುವಂತಾಗಿದೆ.
ಶಾಸಕ ಸುಧಾಕರ ಸ್ಪೀಕರ್ ಕೊಠಡಿಗೆ ತೆರಳಿ ರಾಜಿನಾಮೆ ನೀಡಿ ಹೊರಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಅವರನ್ನು ಎಳೆದೊಯ್ದು ಸಚಿವ ಜಾರ್ಜ್ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಸುಧಾಕರ್ ಅವರನ್ನು ಅಟ್ಟಾಡಿಸಿಕೊಂಡು ಹೋಗಲಾಗಿದೆ. ಈ ವೇಳೆ ಭಾರೀ ಗದ್ದಲ, ಗೊಂದವೇರ್ಪಟ್ಟಿದೆ. ಅವರನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಶಾಸಕರು ಹಾಗೂ ಸುಧಾಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಸಿದ್ದರಾಮಯ್ಯ ವಿಧಾನಸೌಧಕ್ಕೆ ದೌಡಾಯಿಸಿ ಸುಧಾಕರ ಮನವೊಲಿಸಲು ಪ್ರಯತ್ನಿಸಿದರು.
ಇದನ್ನೆಲ್ಲ ಗಮನಿಸಿದ ರಾಜಭವನದ ಅಧಿಕಾರಿಗಳು, ಸುಧಾಕರ್ ಅವರನ್ನು ತಕ್ಷಣ ರಾಜಭವನಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಶನರ್ ವಿಧಾನಸೌಧಕ್ಕೆ ಹಾಜರಾಗಿ ಸುಧಾಕರ್ ಅವರನ್ನು ರಾಜಭವನಕ್ಕೆ ಕರೆದುಕೊಂಡು ಹೋಗಿದ್ದಾರೆ.
ಈ ಎಲ್ಲ ಗೊಂದಲಗಳಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನನೊಂದು ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ. ಕಾಂಗ್ರೆಸ್ ವರ್ತನೆ ವಿರುದ್ಧ ತೀವ್ರ ಕಿಡಿಕಾರಿರುವ ಕುಮಾರಸ್ವಾಮಿ, ತಾವು ಅಮೇರಿಕಾದಿಂದ ಬಂದ ತಕ್ಷಣ ರಾಜಿನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಕಾಂಗ್ರೆಸ್ ನವರು ಅವಕಾಶ ಕೊಡಲಿಲ್ಲ ಎಂದಿದ್ದಾರೆ.
ಸಧ್ಯ ಬಿಜೆಪ್ ತುರ್ತು ಶಾಸಕಾಂಗ ಸಭೆ ಕರೆದಿದ್ದು, ಕಾಂಗ್ರೆಸ್ ಕೂಡ ಸಭೆ ನಡೆಸುತ್ತಿದೆ. ಮೈತ್ರಿ ಮುರಿದುಬಿದ್ದಿರುವುದು ಬಹುತೇಕ ಸ್ಪಷ್ಟವಾಗಿದ್ದು, ಸರಕಾರದ ಪತನ ಖಚಿತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ