ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪನವರಿಗೆ ಗುರು ದತ್ತಾತ್ರೆಯನ ಶಾಪವಿದೆ. ದತ್ತಮಾಲೆ ಧರಿಸಿ, ದತ್ತಪೀಠಕ್ಕೆ ಬರುವುದಾಗಿ ಹೇಳಿದ್ದ ಯಡಿಯೂರಪ್ಪ ಹರಕೆ ತೀರಿಸಿಲ್ಲ. ಹಾಗಾಗಿ ಅವರಿಗೆ ಆಡಳಿತದಲ್ಲಿ ತೊಂದರೆಗಳಾಗುತ್ತಿದೆ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲ್ಕರ್ಣಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಗಂಗಾಧರ ಕುಲ್ಕರ್ಣಿ, ಈ ಹಿಂದೆ ಯಡಿಯೂರಪ್ಪ ದತ್ತಮಾಲೆ ಧರಿಸುವಾಗ ಸಿಎಂ ಆದ ಮೇಲೆ ದತ್ತಪೀಠಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಮೂರುಬಾರಿ ಮುಖ್ಯಮಂತ್ರಿಯಾದರೂ ದತ್ತಪೀಠಕ್ಕೆ ಬಂದಿಲ್ಲ. ಹೀಗಾಗಿ ದತ್ತಾತ್ರೆಯ ಶಾಪವಿದೆ ಎಂದರು.
ಶಾಪ ಪರಿಹಾರವಾಗಬೇಕೆಂದರೆ ಯಡಿಯೂರಪ್ಪ ದತ್ತಮಾಲೆ ಧರಿಸಿ, ದತ್ತಪೀಠಕ್ಕೆ ಬರಬೇಕು. ಆಗ ಪೂರ‍್ನಾವಧಿ ಆಡಳಿತಕ್ಕೆ ತೊಂದರೆಯಾಗುವುದಿಲ್ಲ ಎನಿಸುತ್ತದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ