
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ತಾಲೂಕಿನ ಬೀಡಿ ಹೋಬಳಿಯ ಚುಂಚವಾಡ ಗ್ರಾಮದಲ್ಲಿ ಮಳೆಯಿಂದ ಗೋಡೆ ಬಿದ್ದು ಮೃತಪಟ್ಟಿರುವ ಅನಂತರಾಜ ಧರಣೇಂದ್ರ ಪಾಶೆಟ್ಟಿ(16) ಅವರ ವಾರಸುದಾರರಿಗೆ ತಕ್ಷಣವೇ 5 ಲಕ್ಷ ರೂ. ಪರಿಹಾರವನ್ನು ಆರ್ ಟಿಜಿಎಸ್ ಮೂಲಕ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ಈ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ನಿಯಮಾವಳಿ ಪ್ರಕಾರ ಮೃತ ಬಾಲಕನ ತಂದೆ ಧರಣೇಂದ್ರ ಪಾಶೆಟ್ಟಿ ಇವರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು ಖಾನಾಪುರ ತಹಸೀಲ್ದಾರರ ಪಿಡಿ ಖಾತೆಯಿಂದ ಜಮಾ ಮಾಡಲಾಗಿರುತ್ತದೆ.
ದುರಂತದ ಕುರಿತು ವರದಿ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಮೃತರ ವಾರಸುದಾರರಿಗೆ ಪರಿಹಾರಧನವನ್ನು ನೀಡುವ ಮೂಲಕ ಜಿಲ್ಲಾಡಳಿತವು ಅತ್ಯಂತ ತ್ವರಿತವಾಗಿ ಸ್ಪಂದಿಸಿದೆ.
ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ