Kannada NewsKarnataka NewsLatest

*ಪೊಲೀಸ್ ಠಾಣೆಯಲ್ಲೇ ಪತ್ನಿಯನ್ನು ಕೊಲೆಗೈಯ್ಯಲು ಯತ್ನಿಸಿದ ಪತಿ*

ಪ್ರಗತಿವಾಹಿನಿ ಸುದ್ದಿ; ಹಾಸನ: ಪತಿ ಮಹಾಶಯನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಪತ್ನಿಯನ್ನು ಕತ್ತು ಕುಯ್ದು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಶಿಲ್ಪ ಗಾಯಗೊಂಡಿರುವ ಮಹಿಳೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹರೀಶ್ ಹಾಗೂ ಶಿಲ್ಪಾ 6 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಇಬ್ಬರ ನಡುವೆ ಗಲಾಟೆ, ಜಗಳ ವಿಕೋಪಕ್ಕೆ ತಿರುಗಿ ಬೇಸತ್ತ ಶಿಲ್ಪ ಪತಿ ವಿರುದ್ಧ ಕಿರುಕುಳ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

Home add -Advt

ಈ ಹಿನ್ನೆಲೆಯಲ್ಲಿ ಪೊಲೀಸರು ಹರೀಶ್ ನನ್ನು ಠಾಣೆಗೆ ಕರೆದು ವಿಚಾರಿಸಿದ್ದಾರೆ. ಠಾಣೆಗೆ ಬಂದ ಹರೀಶ್ ಪೊಲಿಸರು ವಿಚಾರಣೆ ನಡೆಸುತ್ತಿದ್ದಾಗಲೇ ಪತ್ನಿ ಶಿಲ್ಪಾಳ ಕತ್ತನ್ನು ಚಾಕುವಿಂದ ಕುಯ್ಯಲು ಯತ್ನಿಸಿದ್ದಾನೆ. ತಕ್ಷ ಪೊಲೀಸರು ಆತನನ್ನು ತಡೆದು, ಕೈಲಿದ್ದ ಚಾಕು ಕಸಿದುಕೊಂಡಿದ್ದಾರೆ.

ಆರೋಪಿ ಹರೀಶ್ ನನ್ನು ಬಂಧಿಸಿದ್ದು, ಗಾಯಾಳು ಶಿಲ್ಪಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Related Articles

Back to top button