Latest

ರಾಜ್ಯದಲ್ಲಿ ಇಂದು 10 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 10 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ. ಕುಂದಾನಗರಿ ಬೆಳಗಾವಿಯಲ್ಲಿ ಇಂದು ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.

ಮಧ್ಯಾಹ್ನ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.

Home add -Advt

ಸೋಂಕಿತರ ವಿವರ:
1. ರೋಗಿ-849: ಕಲಬುರಗಿಯ 38 ವರ್ಷದ ಪುರುಷ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ-850: ದಾವಣಗೆರೆಯ 33 ವರ್ಷದ ಪುರುಷ. ರೋಗಿ 662ರ ಸಂಪರ್ಕ
3. ರೋಗಿ-851: ದಾವಣಗೆರೆಯ 30 ವರ್ಷದ ಮಹಿಳೆ. ರೋಗಿ 663ರ ಸಂಪರ್ಕ
4. ರೋಗಿ-852: ದಾವಣಗೆರೆಯ 56 ವರ್ಷದ ಮಹಿಳೆ. ರೋಗಿ 667ರ ದ್ವಿತೀಯ ಸಂಪರ್ಕ
5. ರೋಗಿ-853: ಹಾವೇರಿಯ ಶಿಗ್ಗಾವಿಯ 26 ವರ್ಷದ ಯುವಕ. ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
6. ರೋಗಿ-854: ಬಾಗಲಕೋಟೆಯ ಬನಹಟ್ಟಿಯ 20 ವರ್ಷದ ಯುವಕ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
7. ರೋಗಿ-855: ಬಾಗಲಕೋಟೆಯ ಬದಾಮಿಯ 28 ವರ್ಷದ ಪುರುಷ. ರೋಗಿ 688ರ ಸಂಪರ್ಕ
8. ರೋಗಿ-856: ವಿಜಯಪುರದ 20 ವರ್ಷದ ಮಹಿಳೆ. ರೋಗಿ 511ರ ಸಂಪರ್ಕ
9. ರೋಗಿ-857: ಬೀದರ್ ನ 50 ವರ್ಷದ ಪುರುಷ. ರೋಗಿ 644ರ ಸಂಪರ್ಕ
10. ರೋಗಿ-858: ಬೀದರ್ ನ 27 ವರ್ಷದ ಯುವಕ. ರೋಗಿ 644ರ ಸಂಪರ್ಕ

ವಿಜಯಪುರ ಜಿಲ್ಲೆಯಲ್ಲಿ ಇಂದು 20 ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 50ಕ್ಕೆ ಏರಿಕೆಯಾಗಿದೆ. ಈ ಮಹಿಳೆಗೆ ರೋಗಿ ನಂಬರ್ 511ರ ಸಂಪರ್ಕದಿಂದ ಸೋಂಕು ಬಂದಿದ್ದು, ಈ ಮಹಿಳೆ ರೋಗಿಯ ಪತ್ನಿ ಎಂದು ತಿಳಿದುಬಂದಿದೆ. ಈಗಾಗಲೇ ಕ್ವಾರಂಟೈನ್‍ನಲ್ಲಿದ್ದ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಈಗ ಬಂದಿರುವ ಎಲ್ಲ ಪ್ರಕರಣಗಳು ರೋಗಿ 556 ಮೃತ ವೃದ್ಧನ ದ್ವಿತೀಯ ಸಂಪರ್ಕದಿಂದ ಸೋಂಕು ಬಂದಿದೆ.

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಇಂದು ಮತ್ತಿಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ನೆಗೆಟಿವ್ ಬಂದಿದ್ದ ತಬ್ಲಿಘಿಗೆ ಮತ್ತೆ ಕೊರೊನಾ ಪಾಸಿಟಿವ್ ಬಂದಿದೆ.

 

Related Articles

Back to top button