Kannada NewsKarnataka NewsLatest

ಸಿಬಿಸಿ ಕೆನಾಲ್ ನಲ್ಲಿ 12 ವರ್ಷದ ಬಾಲಕನ ಶವ ಪತ್ತೆ

 ಪ್ರಗತಿವಾಹಿನಿ ಸುದ್ದಿ, ಕಬ್ಬೂರು – ಕಬ್ಬೂರ ಪಟ್ಟಣದಲ್ಲಿ ರಾಜಸ್ಥಾನ ಮೂಲದ ಭರತ್ ಪಟೇಲ(೧೨) ಎನ್ನುವ ಬಾಲಕ ಮೃತ ದೇಹ ಪತ್ತೆಯಾಗಿದೆ.

ಈತನ ತಂದೆ ಸಗನಾರಂ ಪಟೇಲ ಕಳೆದ ಐದು ವರ್ಷಗಳ ಹಿಂದೆ ಕಬ್ಬೂರ ಪಟ್ಟಣದಲ್ಲಿ ಕಿರಾಣಿ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದ, ಆದರೆ ಮಗ ಭರತನು ಮಧ್ಯಾಹ್ನ ತಂದೆಗೆ ಊಟವನ್ನು ತಂದು ಅಂಗಡಿಗೆ ಕೊಟ್ಟು ಮರಳಿ ಮನೆಗೆ ಹೋಗದೆ ಶವವಾಗಿ ಸಿಬಿಸಿ ಕೆನಾಲದಲ್ಲಿ ಪತ್ತೆಯಾಗಿದ್ದಾನೆ.

Home add -Advt

ಇದೇ ಪಟ್ಟಣದಲ್ಲಿ ರಾಜಸ್ಥಾನ ಮೂಲದ ಗಣಪತಸಿಂಗ್ ಭವಾನಿಸಿಂಗ್ ರಜಪೂತ್ ಎಂಬುವರು ಇಲೇಟ್ರಿಕಲ್ ಅಂಗಡಿಯನ್ನು ನಡೆಸಿತ್ತಿದ್ದರು. ಆದರೆ ಇವರಿಬ್ಬರಲ್ಲಿ ಪರಸ್ಪರ ವೈಮನಸ್ಸು ಇದ್ದ ಕಾರಣ ಸಗನಾರಂಗೆ ಆಗಾಗ ನಿನ್ನ ಮಗನನ್ನು ಕೊಲೆ ಮಾಡುವುದಾಗಿ ಆಗಾಗ ಬೇದರಿಕೆ ಇಡುತ್ತಿದ್ದ. ಆದರೆ ಶನಿವಾರ ಮಧ್ಯಾಹ್ನ ತಂದೆಗೆ ಊಟ ಕೊಟ್ಟು ಮರಳಿ ಮನೆಗೆ ಹೋಗುವ ಸಮಯದಲ್ಲಿ ಆತನನ್ನು ಬೈಕ ಮೇಲೆ ಕುಳ್ಳರಿಸಿಕೊಂಡು ಸಿಬಿಸಿ ಕೆನಾಲದಲ್ಲಿ ಬೈಕ್ ಸಮೇತವಾಗಿ ಜಿಗಿಸಿ ಕೊಲೆ ಮಡಲಾಗಿದೆ ಎಂದು ಭರತನ ತಂದೆ ಸಗನಾರಂ ಪಟೇಲ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಗಣಪತಸಿಂಗ್ ಭವಾನಿಸಿಂಗ್ ರಜಪೂತ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಡಿವೈಎಸ್ಪಿ ಮನೋಜಕುಮಾರ ನಾಯಕ ಮತ್ತು ಪಿಎಸ್‌ಐ ರಾಕೇಶ ಬಗಲಿ ಮತ್ತು ಕಬ್ಬೂರ ಉಪಠಾಣೆ ಸಿಬ್ಬಂದಿ ಸಂಗಪ್ಪಾ ಗುಟ್ಲಿಭೇಟಿ ನೀಡಿ ಪರಿಸಿಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button