Latest

ಕೌನ್ಸಿಲರ್ ನಿಂದ ಮಹಿಳೆಯ ಮೇಲೆ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಬಾರ್ಮಾರ್: ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ವಾರ್ಡ್ ಕೌನ್ಸಿಲ್ ಬಳಿಕ ಬ್ಲ್ಯಾಕ್ ಮೇಲ್ ಮಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಜಸ್ತಾನದ ಬಾರ್ಮಾರ್ ನಲ್ಲಿ ನಡೆದಿದೆ.

ಆರೋಪಿಯನ್ನು ಕಾಂತಿಲಾಲ್ ಎಂದು ಗುರುತಿಸಲಾಗಿದೆ. ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದ ಆರೋಪಿ ಬಳಿಕ ಆಕೆಯನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ತನ್ನ ಸ್ನೇಹಿತನೊಂದಿಗೂ ದೈಹಿಕ ಸಂಪರ್ಕ ಹೊಂದುವಂತೆ ಬಲವಂತ ಮಾಡಿದ್ದಾನೆ ಎನ್ನಲಾಗಿದೆ.

Home add -Advt

ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button