
ಪ್ರಗತಿವಾಹಿನಿ ಸುದ್ದಿ: ಮದ್ಯನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜಿವಾಲ್ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಶುಕ್ರವಾರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜೂ.1 ರವೆಗೆ ಮಧ್ಯಂತರ ಜಾಮೀನು ನೀಡಿದೆ.
ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಂಕರ್ ದತ್ತಾ ಅವರ ನೇತೃತ್ವದ ದ್ವಿಸದಸ್ಯ ಪೀಠವು ಇಂದು ಈ ತೀರ್ಪು ನೀಡಿತು. ಮಾ. 21 ರಂದು ಬಂಧನಕ್ಕೊಳಗಾಗಿದ್ದ ಅರವಿಂದ್ ಕೇಜ್ರವಾಲ್ ಜೈಲಿನಿಂದಲೇ ಆಡಳಿತ ನಡೆಸುತ್ತಿದ್ದರು. ದೆಹಲಿಯ ಮದ್ಯನೀತಿ ಯಲ್ಲಿ ಭಾರೀ ಅಕ್ರಮ ಎಸೆಗಿದ ಆರೋಪದ ಮೇಲೆ ನಾಲ್ವರು ಸಚಿವರೂ ಸೇರಿದಂತೆ ಸಿಎಂ ಅರವಿಂದ್ ಕೇಜ್ರವಾಲ್ ರನ್ನು ಬಂಧನಕ್ಕೊಳಪಡಿಸಲಾಗಿತ್ತು. ಜೊತೆಗೆ ಇಡೀ ಹಗರಣದಲ್ಲಿ ಕೇಜ್ರವಾಲ್ ಅವರೇ ಕಿಂಗ್ ಪಿನ್ ಎಂದು ಇ.ಡಿ ಆರೋಪಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ