Latest

ಪತಿ ವಿರುದ್ಧ ಕಿರುತೆರೆ ನಟಿ ಅತ್ಯಾಚಾರ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಿರುತೆರೆ ನಟಿಯೊಬ್ಬರು ಪತಿ ವಿರುದ್ಧ ಅತ್ಯಾಚಾರ ಹಾಗೂ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಹೊರಗೆ ಭೇಟಿಯಾಗಲು ಕಷ್ಟ ಎಂದು ಮನೆಗೆ ಕರೆಸಿಕೊಂಡು ಮದುವೆಗೂ ಮುನ್ನವೇ ಅತ್ಯಾಚಾರವೆಸಗಿದ್ದಾರೆ. ಅನೆಯಲ್ಲಿ ಕಣ್ಣೀರಿಟ್ಟಾಗ ಮದುವೆಯಾಗುವುದಾಗಿ ಭರವಸೆ ನೀಡಿದ್ದು, ಬಳಿಕ ಹಲವುಬಾರು ಇದೇ ರೀತಿ ಅತ್ಯಾಚಾರ ಮಾಡಿದ್ದಾರೆ. ಈ ಘಟನೆಗಳಿಂದ ಬೇಸತ್ತು ಮದುವೆಗೆ ವಿರೋಧಿಸಿದಾಗ ಮದುವೆ ಬಳಿಕ ಎಲ್ಲವೂ ಸರಿಹೋಗುವುದಾಗಿ ಹೇಳಿ ಬಲವಂತದಿಂದ ಮದುವೆಯಾಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

Home add -Advt

ಅಲ್ಲದೇ ಮದುವೆಯ ಬಳಿಕ ಪತಿ ಹಾಗೂ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿದ್ದು, ಜಾತಿ ನಿಂದನೆ ಮಾಡುತ್ತ ಪ್ರತಿದಿನ ಹಿಂಸೆ ಕೊಡುತ್ತಿರುವುದಾಗಿ ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಟಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲಿಸರು ಆರೋಪಿ ಪತಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಬಿಟ್ ಕಾಯಿನ್, ಹ್ಯಾಕಿಂಗ್ ಬಗ್ಗೆ ಆರೋಪಿ ಶ್ರೀಕಿ ಬಾಯ್ಬಿಟ್ಟ ಸತ್ಯವೇನು?

Related Articles

Back to top button