Latest

ಓಲಾ ಕ್ಯಾಬ್ ನಿಷೇಧ ಹಿಂದಕ್ಕೆ -ಪ್ರಿಯಾಂಕ ಖರ್ಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಓಲಾ ಕ್ಯಾಬ್ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಸರಕಾರ ಹಿಂದೆ ಪಡೆದಿದೆ.

ಈ ಕುರಿತು ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ. ಓಲಾ ಇಂದಿನಿಂದಲೇ ಎಂದಿನಂತೆ ಓಡಲಿದೆ ಎಂದಿದ್ದಾರೆ. ಸಾರಿಗೆ ಇಲಾಖೆ  ಮಾರ್ಚ್ 19ರಂದು 6 ತಿಂಗಳು ಓಲಾ ನಿಷೇಧಿಸಿ ಆದೇಶ ಹೊರಡಿಸಿತ್ತು.

ಬಿಳಿ ನಾಮಫಲಕದ ವಾಹನಗಳನ್ನು ಬಾಡಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಓಲಾ ಸಂಸ್ಥೆ ಈ ನಿಯಮವನ್ನು ಕಡೆಗಣಿಸಿ ಬಿಳಿ ನಾಮಫಲಕದ ವಾಹನಗಳನ್ನು ಕೂಡ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿತ್ತು ಎಂದು ತಿಳಿಸಿದೆ. ಅಗ್ರಿಗೇಟರ್ ನಿಯಮದ 11(1)ಸೆಕ್ಷನ್ ಪ್ರಕಾರ ಆರು ತಿಂಗಳ ಕಾಲ ಓಲಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಆಯುಕ್ತ ವಿಪಿ ಇಕ್ಕೇರಿ ತಿಳಿಸಿದ್ದರು.

ಸಾರಿಗೆ ನಿಯಮಗಳಿಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದು ಸಚಿವ ಖರ್ಗೆ ಹೇಳಿದ್ದಾರೆ.

Related Articles

Back to top button