Latest

ಕುಡಿದ ಮತ್ತಿನಲ್ಲಿ ಕಟ್ಟಡದಿಂದ ಜಿಗಿದ ಯುವಕ

ಪ್ರಗತಿವಾಹಿನಿ ಸುದ್ದಿ, ಪುಣೆ: ಇಲ್ಲಿನ ವಕಾಡ್‌ನಲ್ಲಿರುವ ಬಾರ್ ಹೀಸ್ಟ್ ಹೋಟೆಲ್‌ನ ಎರಡನೇ ಮಹಡಿಯಿಂದ ಹಾರಿ  ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.

ಯರವಾಡಾದ ಅಭಯ ಮನೋಜ ಗೋಂದಣೆ(21) ಮೃತಪಟ್ಟವ.  ಈತ  ಹೋಟೆಲ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ಪಾರ್ಟಿ ಮಾಡುತ್ತಿದ್ದ.  ಕುಡಿದ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಇತರ ಗ್ರಾಹಕರೊಂದಿಗೆ ಇಬ್ಬರೂ ವಾಗ್ವಾದಕ್ಕಿಳಿದಿದ್ದಲ್ಲದೆ  ಅವರನ್ನು ನಿಂದಿಸಲಾರಂಭಿಸಿದರು ಎನ್ನಲಾಗಿದೆ.

Home add -Advt

ಈ ವೇಳೆ ಹೋಟೆಲ್ ಸೆಕ್ಯುರಿಟಿ ಅವರನ್ನು ಥಳಿಸಲು ಪ್ರಾರಂಭಿಸಿದಾಗ, ಪಾನಮತ್ತ ಯುವಕ ಅವರಿಂದ ಪಾರಾಗಲು  ಹೋಟೆಲ್ ಕಟ್ಟಡದೆರಡನೇ ಮಹಡಿಯಿಂದ ಜಿಗಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಿಜಾಬ್ ಹಿಂದಿನ ಸೈದ್ಧಾಂತಿಕ ಶಕ್ತಿಗಳೇ ಪ್ರವೀಣ ಕೊಲೆ ಹಿಂದಿರುವ ಸಾಧ್ಯತೆ: ಅರಗ ಜ್ಞಾನೇಂದ್ರ

Related Articles

Back to top button