Election NewsKarnataka News

*ಉಪಚುನಾವಣೆ ಫಲಿತಾಂಶ: ಸದ್ಯದ ಟ್ರೆಂಡ್ ಹೀಗಿದೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಹ್ನದ ವೇಳೆಗೆ ಬಹುತೇಕ ನಿಚ್ಚಳ ಫಲಿತಾಂಶ ಹೊರಬೀಳಲಿದೆ.

Home add -Advt

ಶಿಗ್ಗಾಂವಿ, ಸಂಡೂರು ಹಗೂ ಚನ್ನಪಟ್ಟಣ ಕ್ಷೇತ್ರಕ್ಕೆ ನ.13ರಂದು ನಡೆದಿದ್ದ ಉಪಚುನಾವಣೆ ಹಿನ್ನೆಲೆಯಲಿ ಇಂದು ಮತ ಎಣಿಕೆ ಆರಂಭವಾಗಿದ್ದು, ಕೆಲವೇ ಘಂಟೆಗಳಲ್ಲಿ ಫಲಿತಾಶ ಪ್ರಕಟವಾಗಲಿದೆ.

ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಿನ್ನಡೆಯಲಿದ್ದಾರೆ.

ನಿಖಿಲ್ ಕುಮರಸ್ವಮೈ 1302 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ಶಿಗ್ಗಾಂವಿಯಲ್ಲಿ ಎನ್ ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆ ಕಾಯ್ದೆಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ತೀವ್ರ ಹಿನ್ನಡೆಯಲಿದ್ದಾರೆ. ಭರತ್ ಬೊಮ್ಮಾಯಿ 662 ಮತಗಳ ಅಂತರದಲ್ಲಿ ಮುನ್ನಡೆಯಲಿದ್ದಾರೆ.

ಸಂಡೂರು ಕ್ಷೇತ್ರದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್, 6ನೇ ಸುತ್ತಿನಲ್ಲಿ ಹಿನ್ನಡೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 900 ಮತಗಳ ಅಂತರದಿಂದ ಮುನ್ನಡೆಯಲಿದ್ದಾರೆ.

Related Articles

Back to top button