Latest

ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಬಕ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮುರ ರೈಲ್ವೆ ಕ್ರಾಸ್ ಬಳಿ 20 ವರ್ಷದ ಯುವಕನ ಮೇಲೆ ದುಷ್ಕರ್ಮಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಮೊಹಮ್ಮದ್ ಹನೀಫ್ ಎಂಬಾತನ ವಿರುದ್ಧ ಸಂತ್ರಸ್ತ ಯುವಕನ ತಂದೆ ದೂರು ದಾಖಲಿಸಿದ್ದಾರೆ.

Home add -Advt

ಮಗನ ಬಟ್ಟೆ ಮಣ್ಣಾಗಿದ್ದರಿಂದ ಸಂತ್ರಸ್ತನ ತಂದೆ ಮಗನನ್ನು ವಿಚಾರಿಸಿದ್ದಾರೆ. ಈ ವೇಳೆ ಮಗ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು ತಂದೆ ಬಳಿ ಕಣ್ಣಿರಿಟ್ಟಿದ್ದಾನೆ. ಕಬ್ಬು ಕೊಡಿಸುವುದಾಗಿ ಪೊದೆಗೆ ಕರೆದೊಯ್ದು ಕೃತ್ಯವೆಸಗಲಾಗಿದೆ ಎಂದು ತಿಳಿಸಿದ್ದಾನೆ.

ಪುತ್ತೂರು ಪೊಲಿಸ್ ಠಾಣೆಯಲ್ಲಿ ಸಂತ್ರಸ್ತನ ತಂದೆ ದೂರು ದಾಖಲಿಸಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೈಕ್ ಸವಾರನ ಮೇಲೆ ಕಾರು ಚಾಲಕನಿಂದ ಗುಂಡಿನ ದಾಳಿ

Related Articles

Back to top button