ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಸರಾ, ವಿಜಯದಶಮಿ ಹಬ್ಬದ ಸಂದರ್ಭದಲ್ಲೇ ಇಂಧನ ದರದಲ್ಲಿ ಸತತವಾಗಿ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ದರ ಶತಕ ಬಾರಿಸಿದೆ.
ಈಗಾಗಲೇ ದೇಶಾದ್ಯಂತ ಪೆಟ್ರೋಲ್ ದರ ನೂರು ರೂಪಾಯಿ ಗಡಿ ದಾಟಿದೆ. ಇದೀಗ ಕರ್ನಾಟಕದ ಜಿಲ್ಲೆಯೊಂದರಲ್ಲಿ ಲೀಟರ್ ಡೀಸೆಲ್ ದರ 100 ರೂಪಾಯಿ ದಾಟಿದ್ದು, ಬೆಲೆ ಏರಿಕೆ ಬಿಸಿಗೆ ಗ್ರಾಹಕರು ಕಂಗಾಲಾಗಿದಾರೆ.
ದಾವಣಗೆರೆಯಲ್ಲಿ ಡೀಸೆಲ್ ದರ ಲೀಟರ್ ಗೆ 100.3ರೂಪಾಯಿ ಆಗಿದೆ. ಡೀಸೆಲ್ ದರ ಪ್ರತಿ ಲಿಟರ್ ಗೆ 37 ಪೈಸೆ ಹೆಚ್ಚಳವಾಗಿದ್ದು ಪ್ರತಿ ಲೀಟರ್ ಡೀಸೆಲ್ ದರ 100.03 ರೂಪಾಯಿ ಆಗಿದೆ. ಜಿಲ್ಲೆಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 31 ಪೈಸೆ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್ ದರ 109.54 ರೂಪಾಯಿ ಆಗಿದೆ.
ಬಳ್ಳಾರಿಯಲ್ಲಿಯೂ ಲೀಟರ್ ಡೀಸೆಲ್ ದರ 100.32 ರೂಪಾಯಿ ಆಗಿದೆ. ಚಿತ್ರದುರ್ಗ, ಉತ್ತರ ಕನ್ನಡ, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಡೀಸೆಲ್ ದರ ನೂರು ರೂಪಾಯಿ ಗಡಿ ದಾಟಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ