Latest

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ ಕುವರಿ ಸಾಧನೆ

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನೇಹಾ ಸಂತೋಷ ಕುಮಾರ್ ಕುಲಕರ್ಣಿ ಇವರು ತೃತೀಯ ಬಹುಮಾನ ಪಡೆದಿದ್ದಾರೆ.

ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ, ಡಾ.ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಉಡುಪಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಸುಶಾಸನ ಮಾಸದ ಅಂಗವಾಗಿ ಡಿ. 22 ರಂದು ಈ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿತ್ತು.

ನೇಹಾ ಅವರು ದಾವಣಗೆರೆ ನಿವಾಸಿಗಳಾದ ಡಾ.ಸಂತೋಷ ಕುಮಾರ್ ಕುಲಕರ್ಣಿ ಮತ್ತು ಅಶ್ವಿನಿ ದಂಪತಿ ಪುತ್ರಿ.

ಇದೇ ವಿದ್ಯಾರ್ಥಿನಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಇದೇ ವಿಷಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದನ್ನು ಸ್ಮರಿಸಬಹುದಾಗಿದೆ.

Home add -Advt

*ಈ 5 ದೇಶದ ಪ್ರಯಾಣಿಕರಿಗೆ RT-PCR ಕಡ್ಡಾಯ; ಮತ್ತೆ ಕ್ವಾರಂಟೈನ್ ರೂಲ್ಸ್ ಸುಳಿವು ನೀಡಿದ ಸಚಿವರು*

https://pragati.taskdun.com/bf-7-viruscorona-virusinternational-travelersrt-pcr-testmandatory/

ವಿಶ್ವದ ಅತಿ ದೊಡ್ಡ ಕೋವಿಡ್ ಆಕ್ರಮಣ; ಒಂದೇ ದಿನದಲ್ಲಿ 3.7 ಕೋಟಿ ಜನರಿಗೆ ಸೋಂಕು

https://pragati.taskdun.com/worlds-largest-covid-outbreak-3-7-crore-people-were-infected-in-a-single-day/

*ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ*

https://pragati.taskdun.com/karnataka-budgetfebruarycm-basavaraj-bommaishiggavi/

*ಶಾಲಾ ಪ್ರವಾಸದ ಬಸ್ ಪಲ್ಟಿ; 7 ಜನರಿಗೆ ಗಾಯ*

https://pragati.taskdun.com/school-busaccident7-people-injuerdbeluru/

Related Articles

Back to top button