Latest

ಭೂಗತ ಪಾತಕಿ ತನ್ನ ದೇಶದಲ್ಲೇ ಇರುವುದಾಗಿ ಒಪ್ಪಿಕೊಂಡ ಪಾಕ್

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿಲ್ಲ ಎಂದು ಹೇಳುತ್ತಲೇ ಇದ್ದ ಪಾಕಿಸ್ತಾನ ಇದೀಗ ದಾವೂದ್ ಇಬ್ರಾಹಿಂ ನ ವಿಳಾಸ ಬಹಿರಂಗಪಡಿಸುವ ಮೂಲಕ ಆತ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಒಪ್ಪಿಕೊಂಡಿದೆ.

ಪಾಸ್‍ಪೋರ್ಟ್ ವಿವರಗಳೊಂದಿಗೆ ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನ ವಿಶ್ವಸಂಸ್ಥೆಗೆ ಸಲ್ಲಿಕೆ ಮಾಡಿದ್ದು, ಇದರಲ್ಲಿ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಸಹ ಇದೆ. ಅಲ್ಲದೆ ಪಾಸ್‍ಪೋರ್ಟ್‍ನಲ್ಲಿ ಪಾಕಿಸ್ತಾನದ ಕರಾಚಿ ವಿಳಾಸ ಸಹ ಇದೆ.

ಇದೇ ಮೊದಲ ಬಾರಿಗೆ ದಾವೂದ್​ ಪಾಕಿಸ್ತಾನದಲ್ಲಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈತನ ಮೇಲೆ ಆರ್ಥಿಕ ನಿರ್ಬಂಧವನ್ನೂ ಹೇರಿದೆ.

Related Articles

Back to top button