![](https://pragativahini.com/wp-content/uploads/2023/04/dks-1-jpg.webp)
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಮಳೆ ಸಮಸ್ಯೆ, ಬಿಬಿಎಂಪಿ ಚುನಾವಣೆ, ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆದಿದ್ದ ಸಭೆಯನ್ನೇ ಬಹಿಷ್ಕರಿಸಿ ಬಿಜೆಪಿ ಶಾಸಕರು ಹೊರ ನಡೆದ ಘಟನೆ ನಡೆದಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ಶಾಸಕರ, ಸಂಸದರ ಸಭೆ ನಿಗದಿ ಪಡಿಸಿದ್ದರು. ಆದರೆ ಸಭೆಗೆ ಬರಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಡವಾಗಿದೆ. ಸಭೆ ಕರೆದು 1 ಗಂಟೆಯಾದರೂ ಉಪಮುಖ್ಯಮಂತ್ರಿ ಸಹೆಗೆ ಬಾರದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಬಿಜೆಪಿ ಶಾಸಕರು ಸಭೆಯಿಂದ ಹೊರ ನಡೆದಿದ್ದಾರೆ.
ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ, ಮುನಿರತ್ನ, ರವಿ ಸುಬ್ರಹ್ಮಣ್ಯ, ಬೈರತಿ ಬಸವರಾಜ್ ಸೇರಿದಂತೆ ಹಲವರು ಸಭೆ ಬಹಿಷ್ಕರಿಸಿ ಹೊರ ನಡೆದಿದ್ದಾರೆ. ಸಭೆ ಕರೆದ ಉಪಮುಖ್ಯಮಂತ್ರಿಗಳೇ ಸಮಯಕ್ಕೆ ಸರಿಯಾಗಿ ಸಭೆಗೆ ಬಂದಿಲ್ಲ ಎಷ್ಟು ಹೊತ್ತು ಕಾಯಬೇಕು? ಎಂದು ಬಿಜೆಪಿ ಶಾಸಕರು ಕಿಡಿಕಾರಿದ ಪ್ರಸಂಗವೂ ನಡೆದಿದೆ.
https://pragati.taskdun.com/d-k-shivakumarreactionworld-environment-day/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ