Latest

ದೆಹಲಿಯಲ್ಲಿ ಮತ್ತೆ ಕಂಪಿಸಿದ ಭೂಮಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಎನ್ ಆರ್ ಸಿ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಧೃಡಪಡಿಸಿದೆ.

ದೆಹಲಿ-ಗುರುಗ್ರಾಮ ಗಡಿಯಲ್ಲಿ ಭೂಕಂಪನದ ಕೇಂದ್ರ ಬಿಂದುವಿದ್ದು, ಭೂಮಿಯ 18 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಮೂಲಕ ದೆಹಲಿ-ಎನ್‍ಸಿಆರ್ ಪ್ರದೇಶವು ಕಳೆದ 2 ತಿಂಗಳುಗಳಲ್ಲಿ 10ಕ್ಕೂ ಹೆಚ್ಚು ಭೂಕಂಪಗಳಿಗೆ ಸಾಕ್ಷಿಯಾಗಿದೆ. ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಭಾಗದಲ್ಲಿ ಭೂಮಿ ಕಂಪಿಸಿದೆ.

ಬುಧವಾರ ರಾತ್ರಿ ನೋಯ್ಡಾ ಬಳಿ ಮಧ್ಯಮ ತೀವ್ರತೆಯ 3.0 ಭೂಕಂಪ ಸಂಭವಿಸಿತ್ತು. ದೆಹಲಿಯಲ್ಲಿ ಸಂಭವಿಸುತ್ತಿರುವ ಸರಣಿ ಭೂಕಂಪಗಳು ಭವಿಷ್ಯದಲ್ಲಿ ದೊಡ್ಡ ಆಘಾತವನ್ನು ಸೃಷ್ಟಿಸುವ ಆತಂಕವನ್ನು ಹೆಚ್ಚಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button