Kannada NewsKarnataka NewsLatest

ಕೊಂದು, ಸುಟ್ಟು, ಬಿಸಾಕಿದ 6 ಜನ ಆರಸ್ಟ್

ಪ್ರಗತಿವಾಹಿನಿ ಸುದ್ದಿ, ಗೋಕಾಕ: ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದು ಪೇಟ್ರೋಲ್‌ನಿಂದ ಸುಟ್ಟು ತಾಲೂಕಿನ ಗಡಾ ಗ್ರಾಮದ ಹೊರವಲಯದಲ್ಲಿ ಬಿಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನ ಆರೋಪಿಗಳನ್ನು  ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸವದತ್ತಿ ತಾಲೂಕಿನ ಕಡಬಿ ಗ್ರಾಮದ ನಿವಾಸಿ ಅಜ್ಜಪ್ಪ ಹರಿಜನ(೩೮) ಮೃತ ವ್ಯಕ್ತಿ.  ಜೂನ್ ೨೫ರಂದು ಮೃತ ಅಜ್ಜಪ್ಪನ ಶವ ಗೋಕಾಕ ತಾಲೂಕಿನ ಗಡಾ ಗ್ರಾಮದ ನಿರ್ಜನ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ  ಪತ್ತೆಯಾಗಿದೆ.

ಪ್ರಕರಣ ದಾಖಲಾಗಿ, ಡಿಎಸ್‌ಪಿ ಮನೋಜಕುಮಾರ ನಾಯಕ ನೇತೃತ್ವದಲ್ಲಿ ಸಿಪಿಐ ಗೋಪಾಲ ರಾಠೋಡ ಹಾಗೂ ಪಿಎಸ್‌ಐ ಪ್ರಕಾಶ ರಾಠೋಡ ಮತ್ತು ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಸಿದ್ದಪ್ಪ ಅಪ್ಪಣ್ಣಾ ಮುಕ್ಕನ್ನವರ (೫೦), ಶಿವಪ್ಪಾ ಬಸಪ್ಪಾ ಕೊಟ್ರೆನ್ನವರ (೪೨), ಸದೆಪ್ಪಾ ಫಕೀರಪ್ಪಾ ನಂದಿ (೩೮), ಮುದಕಪ್ಪಾ ಭೀಮಪ್ಪಾ ಡೊಳ್ಳಿ (೩೮), ಮಹಾಂತೇಶ ಮಹಾದೇವ ಡೊಳ್ಳಿ (೨೨), ಸುರೇಶ ಗುರುನಾಥ ಮಾಳಕ್ಕನವರ (೨೬) ಬಂಧಿತ ಆರೋಪಿಗಳಾಗಿದ್ದಾರೆ.

Home add -Advt

Related Articles

Back to top button