Latest
ಅಪಘಾತ; ಪತಿ- ಪತ್ನಿ ಸೇರಿ ಸವದತ್ತಿಯ ಮೂವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಸವದತ್ತಿ ಬಳಿ ನಡೆದಿದೆ.
ಮೃತರನ್ನು ನಾಗರಾಜ ಇಚ್ಚಂಗಿ (30), ವಿಜಯಾ (42) ಹಾಗೂ ರೇವಣಸಿದ್ದೇಶ್ವರ ಇಚ್ಚಂಗಿ (46) ಎಂದು ಗುರುತಿಸಲಾಗಿದೆ.
ರೇವಣಸಿದ್ದೇಶ್ವರ ಎಂಬುವವರಿಗೆ ಡಯಾಲಿಸಿಸ್ ಮಾಡಿಸಲೆಂದು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಹಾಗೂ ಲಾರಿ ಎರಡೂ ವಾಹನಗಳ ಚಾಲಕರಿಗೆ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.




