ಪ್ರಗತಿವಾಹಿನಿ ಸುದ್ದಿ: ಲೈಂಗಿಕ ಸಂಪರ್ಕ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಬಿಲ್ಲಿ ಬಾಯ್ ಡಿಜಿಟಲ್ ಕಾಂಡೋಮ್ ಪರಿಚಯಿಸಿದೆ.
ಜರ್ಮನಿಯ ಲೈಂಗಿಕ ಆರೋಗ್ಯ ಬ್ರ್ಯಾಂಡ್ ಬಿಲ್ಲಿ ಬಾಯ್, ಇಂತದ್ದೊಂದು ತಂತ್ರಜ್ಞಾನಾತ್ಮಕ ಕಾಂಡೊಮ್ ಪರಿಚಯಿಸಿದ್ದು, ಇದರಿಂದ ದೈಹಿಕ ಸಂಪರ್ಕ ಸಂದರ್ಭದ ಮಾಹಿತಿ ಸೋರಿಕೆಯಾಗಲ್ಲ ಎನ್ನಲಾಗಿದೆ.
ರೂಮ್ ನಲ್ಲಿರುವ ಮೊಬೈಲ್, ಕ್ಯಾಮರಾ, ಅಥವಾ ಹೊರಗಿನಿಂದ ಯಾರಾದರೂ ಕ್ಯಾಮರಾ, ಮೈಕ್ರೋಫೋನ್ ಗಳಿಂದ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಸಹಾಯ ಮಾಡಲಿದೆ.
‘ಕ್ಯಾಮ್ಡಮ್’ ಎಂದು ಕರೆಯಲ್ಪಡುವ ಈ ಡಿಜಿಟಲ್ ಕಾಂಡೊಮ್, ಸ್ಮಾರ್ಟ್ ಫೋನ್ ಗಳ ಕ್ಯಾಮರಾಗಳು ಹಾಗೂ ಮೈಕ್ರೋಫೋನ್ ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಅನಧಿಕೃತ ರೆಕಾರ್ಡಿಂಗ್ ಗಳನ್ನು ತಡೆಯಲು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.
ಒಂದು ವೇಳೆ ಯಾರಾದರೂ ಅನಧಿಕೃತವಾಗಿ ರೆಕಾರ್ಡ್ ಮಾಡುತ್ತಿದ್ದರೆ ತಕ್ಷಣವೇ ಕ್ಯಾಮ್ಡಮ್ ಮೊಬೈಲ್ ಮಾಲೀಕರಿಗೆ ಮಾಹಿತಿ ರವಾನಿಸುತ್ತದೆ. ಅಲ್ಲದೇ ಈ ಆಪ್, ಏಕಕಾಲದಲ್ಲಿ ಹಲವು ಸಾಧನಗಳನ್ನು ಬ್ಲಾಕ್ ಮಾಡಬಲ್ಲದು. ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಇಬ್ಬರು ಫೋನ್ ನ್ನು ಸಮೀಪವೇ ಇಟ್ಟು ವರ್ಚುವಲ್ ಬಟನ್ ಪ್ರೆಸ್ ಮಾಡಿಟ್ಟರೆ ಖಾಸಗಿ ಕ್ಷಣಗಳ ಚಿತ್ರೀಕರಣ ಯಾರೇ ಮಾಡುತ್ತಿದ್ದರೂ ಅಲರಾಂ ಹೊಡೆದುಕೊಳ್ಳುತ್ತದೆ. ಈಗಾಗಲೇ ಈ ಮೊಬೈಲ್ ಅಪ್ಲಿಕೇಶನ್ 30 ದೇಶಗಳಲ್ಲಿ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ