Latest

ವೀಲ್ ಚೇರ್‌ನಲ್ಲಿ ಬಂದ ಯುವತಿಯನ್ನು ಹೊರಹಾಕಿದ ಪಬ್ ಸಿಬ್ಬಂದಿ

 

ಅಮಾನವೀಯ ಘಟನೆಗೆ ಸಾರ್ವಜನಿಕರ ಆಕ್ರೋಶ

 

 

ಪ್ರಗತಿ ವಾಹಿನಿ ಸುದ್ದಿ ನವದೆಹಲಿ: ನಡೆಯುವ ಶಕ್ತಿಯನ್ನು ಕಳೆದುಕೊಂಡಿರುವ ವಿಕಲಚೇತನ ಯುವತಿಯನ್ನು, ಬೇರೆ ಗ್ರಾಹಕರಿಗೆ ಕಿರಿಕಿರಿಯಾಗುತ್ತದೆ ಎಂಬ ಕಾರಣವೊಡ್ಡಿ ಪಬ್‌ನೊಳಗೆ ಬಿಟ್ಟುಕೊಳ್ಳದೆ ಅಮಾನವೀಯತೆ ಪ್ರರ್ಶೀಸಿದ ಘಟನೆಯೊಂದು ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.

ನಾನು ವಿಕಲಚೇತನಳಾಗಿರುವುದರಿಂದ ವೀಲ್ ಚೇರ್‌ನಲ್ಲಿ ಪಬ್‌ಗೆ ತೆರಳಿದ್ದೆ. ಅದರಿಂದ ಬೇರೆ ಗ್ರಾಹಕರಿಗೆ ಮುಜುಗರವಾಗುತ್ತದೆ ಎಂಬ ಕಾರಣ ನೀಡಿ ರಾಸ್ತಾ ಹೆಸರಿನ ಪಬ್‌ನವರು ನನ್ನನ್ನು ಹೊರಗಡೆ ಕುಳ್ಳಿರಿಸಿದ್ದರು ಎಂದು ೨೨ ವರ್ಷದ ಸೃಷ್ಟಿ  ಪಾಂಡೆ ಎಂಬ ಯುವತಿ ಆರೋಪಿಸಿದ್ದಾರೆ.

ಎಂ. ಎ. ಸೈಕಾಲಜಿ ವಿದ್ಯಾರ್ಥಿನಿಯಾಗಿರುವ ಸೃಷ್ಟಿ ಪಾಂಡೆ, ಶುಕ್ರವಾರ ರಾತ್ರಿ ಗುರುಗ್ರಾಮದ ಪಬ್ ಒಂದಕ್ಕೆ ಸ್ನೇಹಿತರ ಕುಮಟುಂಬದವರ ಜೊತೆ ತೆರಳಿದ್ದರು. ಈ ವೇಳೆ ಪಬ್ ಒಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಓರ್ವ ಸಿಬ್ಬಂದಿ, ಸೃಷ್ಟಿ ಅವರತ್ತ ಬೊಟ್ಟು ಮಾಡಿ, ಒಳಗಡೆ ಬೇರೆ ಗ್ರಾಹಕರಿಗೆ ಕಿರಿಕಿರಿಯಾಗುತ್ತದೆ ಎಂದು ಅವರನ್ನು ಪಬ್‌ನ ಹೊರಭಾಗದಲ್ಲಿಯೇ ಕುಳ್ಳಿರಿಸಿದ್ದಾರೆ. ಈ ಘಟನೆಯಿಂದ ನನಗೆ ತೀವ್ರ ಅವಮಾನವಾಗಿದೆ ಎಂದು ಸೃಷ್ಟಿ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ನನಗೆ ಇದು ಮೊದಲ ಅನುಭವವಲ್ಲ, ಈ ಮೊದಲೂ ಸಹ ಹಲವಾರು ಬಾರಿ ಶಾಲೆಯಲ್ಲಿ, ಕಾಲೇಜಿನಲ್ಲಿ, ಹೋಟೆಲ್‌ಗಳಲ್ಲಿ ಇಂಥಹ ಅವಮಾನ ಎದುರಿಸಿದ್ದೇನೆ. ನಾನು ಇತರರಂತೆ ಇಲ್ಲ ಎಂಬ ಕೀಳರಿಮೆಯ ಭಾವನೆ ನನ್ನಲ್ಲಿ ಉಂಟಾಗಿದೆ ಎಂದು ಸೃಷ್ಟಿ ಅಳಲು ತೋಡಿಕೊಂಡಿದ್ದಾರೆ.

ಸೃಷ್ಟಿಯವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಹಲವಾರು ಜನ, ಪಬ್ ಸಿಬ್ಬಂದಿಯ ವರ್ತನೆಯ ವಿರುದ್ಧ ಕಿಡಿಕಾರಿದ್ದಾರೆ. ಸೃಷ್ಟಿಯವರಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ.

ಸುರಕ್ಷತೆಯ ಕಾರಣ ನೀಡಿದ ಪಬ್ ಮ್ಯಾನೇಜರ್

ಸೃಷ್ಟಿ ಅವರ ಆರೋಪದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಸ್ತಾ ಪಬ್‌ನ ಮ್ಯಾನೇಜರ್ ಮಾಧವ್ ಸಿಂಗ್, ಕೇವಲ ಸುರಕ್ಷತೆಯ ಕಾರಣಗಳಿಗಾಗಿ ಮಾತ್ರ ಸೃಷ್ಟಿ ಅವರನ್ನು ಪ್ರತ್ಯೇಕವಾಗಿ ಕುಳ್ಳಿರಿಸಲಾಗಿತ್ತು ಎಂದಿದ್ದಾರೆ.

ನಾವು ಸೃಷ್ಟಿಯವರಿಗೆ ಪಬ್‌ನ ಯಾವುದೇ ಸೇವೆಯನ್ನು ನೀಡಲು ನಿರಾಕರಿಸಿಲ್ಲ. ಆದರೆ ಪಾರ್ಟಿ ನಡೆಯುವ ಸಮಯದಲ್ಲಿ ಸೃಷ್ಟಿ ಅವರ ಸುರಕ್ಷತೆಗೆ ತೊಂದರೆ ಆಗಬಾರದು ಎಂಬ ಏಕೈಕ ಕಾರಣಕ್ಕೆ ಅವರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳಲು ಹೇಳಲಾಗಿತ್ತು. ಒಳಗಡೆ ಬಹಳ ಜನಜಂಗುಳಿ ಇದ್ದ ಕಾರಣ ಸೃಷ್ಟಿಗೆ ಓಡಾಡಲು ಕಷ್ಟವಾಗುವ ಸಾಧ್ಯತೆ ಇತ್ತು. ಅಲ್ಲದೇ ಪಬ್‌ನಲ್ಲಿ ವೇಲ್ ಚೇರ್ ಸಂಚರಿಸುವ ಮಾರ್ಗ ಇರಲಿಲ್ಲ. ಎರಡು ಎತ್ತರವಾದ ಮೆಟ್ಟಿಲುಗಳಿದ್ದು ವೀಲ್ ಚೇರ್‌ನಿಂದ ಬರುವಾಗ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ದೇಶವನ್ನೇ ಬೆಚ್ಚಿ ಬೀಳಿಸಿದ ಕಾರ್ಯಾಚರಣೆ: ಡ್ರಗ್ಸ್‌ನಿಂದಲೇ ಭರ್ತಿಯಾಗಿದ್ದ ಹಡಗು ಕಂಡು ಹೌಹಾರಿದ ಅಧಿಕಾರಿಗಳು!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button