LatestNational

*70 ವರ್ಷದ ವೃದ್ಧನ ಪಿತ್ತಕೋಶದಿಂದ  8,000 ಕಲ್ಲು ಹೊರತೆಗೆದ ವೈದ್ಯರು*

ಪ್ರಗತಿವಾಹಿನಿ ಸುದ್ದಿ: 5 ವರ್ಷಗಳಿಂದ ನಿರಂತರವಾಗಿ ಹೊಟ್ಟೆ ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದ 70 ವರ್ಷದ ವೃದ್ಧನ ಪಿತ್ತಕೋಶದಿಂದ ಬರೋಬ್ಬರಿ 8,000 ಕಲ್ಲುಗಳನ್ನು ಹೊರತೆಗೆದಿರುವ ಘಟನೆ ನಡೆದಿದೆ.

ಹರಿಯಾಣದ ಗುರ್ಗಾಂವ್‌ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಚ್ಚರಿಯ ವೈದ್ಯಕೀಯ ಘಟನೆಗೆ ಸಾಕ್ಷಿಯಾಗಿದೆ. 

Home add -Advt

ಆಸ್ಪತ್ರೆಯ ವೈದ್ಯರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಡಾ. ಜಾವೇದ್ ಮತ್ತು ಡಾ. ಯಾಂಗರ್ ಅವರ ಪ್ರಕಾರ, ರೋಗಿಯ ಪಿತ್ತಕೋಶವು ಊದಿಕೊಂಡಿತ್ತು ಮತ್ತು ಕಲ್ಲುಗಳಿಂದ ತುಂಬಿತ್ತು. ಅದು ಛಿದ್ರವಾಗುವ ಹಂತದಲ್ಲಿತ್ತು. ಇದು ಕಲ್ಲುಗಳು ರೋಗಿಯ ಹೊಟ್ಟೆಗೆ ಚೆಲ್ಲಲು ಕಾರಣವಾಗುತ್ತಿತ್ತು. ತುರ್ತು ಚಿಕಿತ್ಸಾಲಯಕ್ಕೆ ತಂದಾಗ ರೋಗಿಗೆ ತೀವ್ರ ನೋವು ಇತ್ತು. ನಾವು ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ಮಾಡಿ ಕಲ್ಲುಗಳನ್ನು ಹೊರತೆಗೆದಿದ್ದಾಗಿ ತಿಳಿಸಿದ್ದಾರೆ.

ವೈದ್ಯರ ಪ್ರಕಾರ, ವಯಸ್ಸಾದ ರೋಗಿಯು ಹಲವಾರು ವರ್ಷಗಳಿಂದ ನಿರಂತರ ಹೊಟ್ಟೆ ನೋವು, ಮಧ್ಯಂತರ ಜ್ವರ, ಹಸಿವು ಕಡಿಮೆಯಾಗುವುದು ಮತ್ತು ದೌರ್ಬಲ್ಯದಿಂದ ಬಳಲುತ್ತಿದ್ದರು. ಜೊತೆಗೆ ಎದೆ ಮತ್ತು ಬೆನ್ನಿನಲ್ಲಿ ಭಾರವಾದ ಭಾವನೆಯೂ ಇತ್ತು. ಆರಂಭದಲ್ಲಿ ರೋಗಿಯು ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದರು. ದಾಖಲಾದ ನಂತರ ಹೊಟ್ಟೆಯ ಅಲ್ಮಾಸೌಂಡ್ ಸ್ಕ್ಯಾನ್ ನಡೆಸಲಾಯಿತು. ಇದು ದಟ್ಟವಾಗಿ ತುಂಬಿದ ಪಿತ್ತಕೋಶವನ್ನು ಬಹಿರಂಗಪಡಿಸಿತು. ಸ್ಥಿತಿಯನ್ನು ನೋಡಿ ವೈದ್ಯರ ತಂಡ ತಕ್ಷಣವೇ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ನಡೆಸಿ ಬೃಹತ್ ಸಂಖ್ಯೆಯ ಪಿತ್ತಗಲ್ಲುಗಳನ್ನು ತೆಗೆದುಹಾಕಿತು. ಶಸ್ತ್ರಚಿಕಿತ್ಸೆ ಒಂದು ಗಂಟೆಯಲ್ಲಿ ಪೂರ್ಣಗೊಂಡಿದ್ದು, ಎರಡು ದಿನಗಳಲ್ಲಿ ರೋಗಿಯನ್ನು ಸ್ಥಿರ ಸ್ಥಿತಿಯನ್ನು ನೋಡಿಕೊಂಡು ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು.

ಶಸ್ತ್ರಚಿಕಿತ್ಸೆ ಕೇವಲ 1 ಗಂಟೆಯಲ್ಲಿ ನೆರವೇರಿದರೂ ಕಲ್ಲುಗಳ ಸಂಖ್ಯೆಯನ್ನು ಎಣಿಸುವುದೇ ವೈದ್ಯರಿಗೆ ತಲೆನೋವಾಗಿತ್ತು. ಕಲ್ಲುಗಳನ್ನು ಎಣಿಸಲು ವೈದ್ಯರು ಬರೋಬ್ಬರಿ 6 ಗಂಟೆಗಳನ್ನೆ ತೆಗೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಅವರು ಗಂಟೆಗಳ ಕಾಲ ಕುಳಿತು ಕಲ್ಲುಗಳ ಸಂಖ್ಯೆಯನ್ನು ಎಣಿಸಿದ್ದು ಕಲ್ಲುಗಳ ನಿಖರ ಸಂಖ್ಯೆಯನ್ನು 8,125 ಎಂದು ತಿಳಿಸಿದ್ದಾರೆ.

Related Articles

Back to top button