Kannada NewsKarnataka NewsLatest

ಖಾನಾಪುರ ಭಾಗದಲ್ಲಿ ಚರ್ಮಗಂಟು ರೋಗ ನಿಯಂತ್ರಣ ಹೆಚ್ಚುವರಿ ಕ್ರಮಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ ಹಲವು ದಿನಗಳಿಂದ ರೈತರು, ಪಶುಪಾಲಕರಿಗೆ ಸಮಸ್ಯೆಯಾಗಿ ಪರಿಣಮಿಸಿರುವ ಜಾನುವಾರುಗಳ ಚರ್ಮಗಂಟು ರೋಗದ ನಿಯಂತ್ರಣಕ್ಕೆ ಖಾನಾಪುರ ತಾಲೂಕಿನಲ್ಲಿ ಕೆಲ ಉಪಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಪಶು ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಕುಲೇರ್ ಅವರಿಗೆ ಮನವಿ ಸಲ್ಲಿಸಿದರು.

ಖಾನಾಪುರದಲ್ಲಿ ಜಾನುವಾರುಗಳು ಚರ್ಮ ಗಂಟು ರೋಗದಿಂದ ಬಳಲುತ್ತಿವೆ. ರೈತರು ತಮ್ಮ ಜಾನುವಾರುಗಳ ಸಾವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ.ಆದ್ದರಿಂದ ಖಾನಾಪುರ ಪ್ರದೇಶದಲ್ಲಿ ಲಸಿಕೆ ಮತ್ತು ಚಿಕಿತ್ಸೆಯ ಪ್ರಮಾಣವನ್ನು ಹೆಚ್ಚಿಸಲು ಡಾ. ಸೋನಾಲಿ ಒತ್ತಾಯಿಸಿದರು.

ಪೂರ್ವ ಮತ್ತು ಪಶ್ಚಿಮ ಖಾನಾಪುರದಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆಯೂ ಅವರು ವಿನಂತಿಸಿದರು.

ಲಂಪಿ ಸ್ಕಿನ್ ಡಿಸೀಸ್ (ಎಲ್‌ಎಸ್‌ಡಿ) ಜಾನುವಾರುಗಳ ಅತ್ಯಂತ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದ್ದು, ಅವುಗಳ ಸಾವಿಗೆ ಕಾರಣವಾಗುತ್ತಿದೆ. ಇದು ಮನುಷ್ಯರ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ಜಾನುವಾರು ಕಲ್ಯಾಣ ಸಮಸ್ಯೆಗಳನ್ನು ಹುಟ್ಟುಹಾಕಿ ಅವುಗಳಿಂದ ಲಭ್ಯ ಉತ್ಪಾದನೆಯ ನಷ್ಟಕ್ಕೆ ಕಾರಣವಾಗುವುದರಿಂದ ಈ ಬಗ್ಗೆ ಕ್ಷಿಪ್ರ ಗತಿಯಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದು ಡಾ. ಸೋನಾಲಿ ಸರನೋಬತ್ ಒತ್ತಾಯಿಸಿದರು.

Home add -Advt

ಔಷಧ ಲಭ್ಯ:

ಇದೇ ವೇಳೆ ಖಾನಾಪುರದ  ಡಾ. ಸರ್ನೋಬತ್ ಅವರ ಸಮಸ್ಯಾ ಪರಿಹಾರ ಕೇಂದ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಮುನ್ನೆಚ್ಚರಿಕೆ ಹಾಗೂ ಗುಣಪಡಿಸಲು ಹೋಮಿಯೋಪಥಿಕ್ ಔಷಧ ಲಭ್ಯವಿದ್ದು ಸಾರ್ವಜನಿಕರು ಇಲ್ಲಿಂದ ಸಂಗ್ರಹಿಸಬಹುದು ಎಂದು ಡಾ. ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.

ತಾಲೂಕು ಮಟ್ಟದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಂದಿನಿ ಸೈಕ್ಲಿಂಗ್ ಸ್ಪರ್ಧೆ

Related Articles

Back to top button